ಕೊಣಾಜೆ: ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕನ್ನಡ ವಿತರಣೆ ಕಾರ್ಯಕ್ರಮ

ಶೇರ್ ಮಾಡಿ

ಕೊಣಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಜ್ಞಾನ ವಿಕಾಸದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕನ್ನಡ ವಿತರಣೆ ಕಾರ್ಯಕ್ರಮ ಬಿಳಿನೆಲೆ ವಲಯದ ಕೊಣಾಜೆಯಲ್ಲಿ ನಡೆಯಿತು.
ಎಸ್ ಡಿ ಎಂ ಆಸ್ಪತ್ರೆ ಉಜಿರೆ ಇಲ್ಲಿಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ರೋಗಿಗಳಿಗೆ ಉಚಿತ ಔಷಧ ವಿತರಣೆ ಹಾಗೂ ಕನ್ನಡ ವಿತರಣೆ ಮಾಡಲಾಯಿತು. 189 ಜನ ಸದಸ್ಯರು ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.
ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಣಾಜೆ, ಗ್ರಾಮಪಂಚಾಯತ್ ಕೊಣಾಜೆ, ಹಾಲು ಉತ್ಪಾದಕರ ಸಹಕಾರ ಸಂಘ ಕೊಣಾಜೆ, ಕೃಷಿ ಪತ್ತಿನ ಸಹಕಾರಿ ಸಂಘ ಕೊಣಾಜೆ, ಶ್ರೀ ದುರ್ಗಾಂಬಿಕ ಭಜನಾ ಮಂಡಳಿ ಮತ್ತು ಸೇವಾ ಸಮಿತಿ ಕೊಣಾಜೆ ಮೊದಲಾದವರ ಸಹಕಾರದೊಂದಿಗೆ ಕಾರ್ಯಕ್ರಮ ಸಂಯೋಜನೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಿಳಿನೆಲೆ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ತಮ್ಮಯ ಗೌಡ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಕೊಣಾಜೆ ಒಕ್ಕೂಟದ ಅಧ್ಯಕ್ಷರಾದ ಡೀಕಯ್ಯ ಗೌಡ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು, ಉಜಿರೆ ಎಸ್ .ಡಿ.ಯಂ.ಆಸ್ಪತ್ರೆಯ ವೈದ್ಯರಾದ ಡಾ.ಸುಭಾಶ್ಚಂದ್ರ, ಡಾ
ಚಿನ್ಮಯ್, ಡಾ.ಯಶಸ್ವಿನಿ, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಪ್ಪ ಗೌಡ, ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಘುಚಂದ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಬಿ.ಎಸ್.ಆನಂದ, ದುರ್ಗಾಂಬಿಕ ಭಜನಾ ಮಂಡಳಿ ಅಧ್ಯಕ್ಷ ವೀರಪ್ಪ ಕಾಂತ್ರೇಲು,ದುರ್ಗಾಂಬಿಕ ಸೇವಾ ಸಮಿತಿಯ ಅಧ್ಯಕ್ಷರಾದ ಪುಂಡರೀಕಾಕ್ಷ ಮೊದಲಾದವರು ಉಪಸ್ಥಿತರಿದ್ದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನಾ ಕಾರ್ಯಕ್ರಮ ನಿರೂಪಿಸಿ, ಬಿಳಿನೆಲೆ ವಲಯದ ಮೇಲ್ವಿಚಾರಕ ಆನಂದ ಸ್ವಾಗತಿಸಿದರು. ಕೊಣಾಜೆ ಗ್ರಾಮದ ಸೇವಾ ಪ್ರತಿನಿಧಿ ಬೇಬಿ ವಂದಿಸಿದರು.

Leave a Reply

error: Content is protected !!