ನೆಲ್ಯಾಡಿ: ನೆಲ್ಯಾಡಿ ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ 45ನೇ ವರುಷದ ಮಕರ ಜ್ಯೋತಿ ಉತ್ಸವ, ಭಜನಾ ಮಹೋತ್ಸವದ ಸಮಾರೋಪ ಸಮಾರಂಭ ಜ.14ರ ಶನಿವಾರ ಪ್ರಾತಃಕಾಲ 6:30 ರಿಂದ ಜ.15ನೇ ಆದಿತ್ಯವಾರ ಪ್ರಾತಃಕಾಲ 6:30ರ ವರೆಗೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ:
ದೇವಳದ ಗೌರವಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಸಂಪುಟ ನರಸಿಂಹ ಮಠ ಸುಬ್ರಮಣ್ಯ ಇವರ ಕೃಪಾಶೀರ್ವಾದದೊಂದಿಗೆ ಜ.14ರ ಬೆಳಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಸುರೇಶ್ ಮುಚ್ಚಿಂತಾಯರಿಂದ ಅಯ್ಯಪ್ಪ ಸ್ವಾಮಿ ದೇವರಿಗೆ ಉಷಾಪೂಜೆ ಬಳಿಕ ಶ್ರೀಧರ ನೂಜಿನ್ನಾಯರ ನೇತೃತ್ವದಲ್ಲಿ ಮಕರ ಸಂಕ್ರಾಂತಿಯ ಧಾರ್ಮಿಕ ಕಾರ್ಯಕ್ರಮಗಳು, ಮಹಾಗಣಪತಿ ಹೋಮ, ಸೀಯಾಳಾಭಿಷೇಕ, ತುಪ್ಪಾಭಿಷೇಕ, ಅಶ್ವಥ ಕಟ್ಟೆಯಲ್ಲಿ ಅಶ್ವತ್ಥ ಪೂಜೆ, ಮಹಾರಂಗಪೂಜೆ ಮತ್ತು ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಗಂಟೆ 6:30ಕ್ಕೆ ನೀಲಾಂಜನ ದೀಪ ದರ್ಶನ ಮೆರವಣಿಗೆ, ದೀಪಾರಾಧನೆ, ಪುಷ್ಪಾಭಿಷೇಕ, ರಾತ್ರಿ ಗಂಟೆ 12ಕ್ಕೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ. ಜ.5:30ಕ್ಕೆ ಭಜನಾ ಮಂಗಳೋತ್ಸವ.
ಸಭಾ ಕಾರ್ಯಕ್ರಮ:
ರಾತ್ರಿ ಗಂಟೆ 8ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ ಕೌಕ್ರಾಡಿ ಯ ಅಧ್ಯಕ್ಷರಾದ ಡಾ.ಸದಾನಂದ ಕುಂದರ್, ಧಾರ್ಮಿಕ ಉಪನ್ಯಾಸ ಸಾಹಿತಿ, ಯಕ್ಷಗಾನ ಅರ್ಥಧಾರಿ ಮತ್ತು ಲೇಖಕರು ಆದ ರಾಧಾಕೃಷ್ಣ ಕಲ್ಚಾರು, ಮುಖ್ಯ ಅತಿಥಿಗಳಾಗಿ ಯಕ್ಷಗಾನ ಸಂಘಟಕರು ಆದ ಭುಜಬಲಿ ಧರ್ಮಸ್ಥಳ, ಉದ್ಯಮಿಗಳು ಸೌತಡ್ಕ ಬಾಲಕೃಷ್ಣ ನೈಮಿಷ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ 1.00 ಗಂಟೆಗೆ ಉಕ್ಷಿಪ್ತ ನೃತ್ಯ ಕಲಾ ಶಾಲೆ ನೆಲ್ಯಾಡಿ- ಮಂಗಳೂರು ವಿದುಷಿ ಶ್ರೀಮತಿ ಸುರೇಖಾ ಹರೀಶ್ ರವರ ಶಿಷ್ಯ ವೃಂದದವರಿಂದ ಭರತನಾಟ್ಯ, ರಾತ್ರಿ ಗಂಟೆ 9:30ಕ್ಕೆ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಈ ಕ್ಷೇತ್ರ ಹಿರಿಯಡ್ಕ ಇವರಿಂದ “ಮಹಿಮೆದ ಮಾಣಿಕ್ಯ” ಯಕ್ಷಗಾನ.
ಕಾರ್ಯಕ್ರಮಗಳು ನಡೆಯಲಿವೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ಮತ್ತು ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಕೆ ಎಸ್., ಪ್ರಕಟಣೆಯಲ್ಲಿ ತಿಳಿಸಿದರು.