ಯುವಕನನ್ನು ಬಲಿ ಪಡೆದ ಮರಳು ಸಾಗಿಸುವ ಟಿಪ್ಪರ್

ಶೇರ್ ಮಾಡಿ

ಕೊಕ್ಕಡ: ಮರಳು ಸಾಗಿಸುವ ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಕೊಕ್ಕಡದ ಸಿರಾಜುದ್ದೀನ್ (34) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟ ಘಟನೆ ವರದಿಯಾಗಿದೆ.

ಸಿರಾಜುದ್ದೀನ್ ರವರು ಕೊಕ್ಕಡದಿಂದ ಉಪ್ಪಾರಪಳಿಕೆ ಗೋಳಿತೊಟ್ಟು ಮಾರ್ಗವಾಗಿ ಬಿಸಿ ರೋಡಿಗೆ ಹೋಗುವ ಸಂದರ್ಭ ಕೊಲ್ಲಾಜೆಪಳಿಕೆ ಎಂಬಲ್ಲಿ ಕೊಕ್ಕಡದ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಸತತ ಚಿಕಿತ್ಸೆ ನೀಡಿದರೂ ಸ್ಪಂದಿಸದ ಕಾರಣ ಫೆ.7ರ ಸಂಜೆ ಕೊನೆಯುಸಿರೆಳೆದರು.
ಸಿರಾಜುದ್ದೀನ್ ಪಟ್ರಮೆ ಗ್ರಾಮದ ಅಬೂಬಕ್ಕರ್ ಎಂಬುವವರ ಮಗನಾಗಿದ್ದು ಕಳೆದ 12 ವರ್ಷಗಳಿಂದ ಕೊಕ್ಕಡ ಪಟ್ರಮೆ ಭಾಗಗಳಲ್ಲಿ ಅಡಕೆ ವ್ಯಾಪಾರ ನಡೆಸುತ್ತಿದ್ದರು. SKSSF ಕೊಕ್ಕಡ ಯುನಿಟ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಜಿಲ್ಲಾ ವಿಖಾಯ ಆಕ್ಟಿವ್ ವಿಂಗ್ ಮೆಂಬರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು .
ಮೃತರು ತಂದೆ, ತಾಯಿ, ಪತ್ನಿ ಹಾಗೂ ಒಂದು ವರ್ಷ ಪ್ರಾಯದ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೊಕ್ಕಡ ಪಟ್ಟಣ ಭಾಗಗಳಲ್ಲಿ ಮರಳು ಟಿಪ್ಪರ್ ಹಾಗೂ ಲಾರಿಗಳು ಅತಿ ವೇಗದ ಚಾಲನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

Leave a Reply

error: Content is protected !!