ನೂಜಿಬಾಳ್ತಿಲ: ಸಾಹಿತ್ಯ ಹಾಗು ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿರುವ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಮಂಗಳೂರು ಹಾಗು ಕನ್ನಡ & ಸಂಸ್ಕೃತಿ ಇಲಾಖೆ ದ.ಕ ವತಿಯಿಂದ ನಾಡು ನುಡಿ ಸಾಹಿತ್ಯ ಸಮ್ಮೇಳನ 2023 ‘ಕಾವ್ಯ ದಶಾವತಾರ’ ಎಂಬ ವಿನೂತನ ಕಾರ್ಯಕ್ರಮವನ್ನು ಫೆ.26 ರಂದು ಮಂಗಳೂರು ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ಸಮ್ಮೇಳನದ ಕೇಂದ್ರ ಆಕರ್ಷಣೆ ‘ಕಾವ್ಯ ದಶಾವತಾರ’ವಾಗಿದ್ದು, ಮಂಡಳಿಯು ರಾಜ್ಯದ ವಿವಿಧ ಭಾಗಗಳಿದಿಂದ ಸುಮಾರು ನೂರು ಜನ ಸಾಹಿತ್ಯ ದಿಗ್ಗಜರನ್ನು ಆಯ್ಕೆ ಮಾಡಿಕೊಂಡಿದೆ.
ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಯುವ ಬರಹಗಾರ ಸಮ್ಯಕ್ತ್ ಜೈನ್ ಆಯ್ಕೆಗೊಂಡಿರುತ್ತಾರೆ. ತನ್ನ ಎಳೆ ವಯಸ್ಸಿನಿಂದಲೇ ಸಾಹಿತ್ಯದ ಅಭಿರುಚಿಯನ್ನು ಹೊಂದಿರುವ ಇವರು ಈವರೆಗೆ ಮೂರು ಕೃತಿಗಳನ್ನು ಪ್ರಕಟಗೊಳಿಸಿರುತ್ತಾರೆ. ಅಲ್ಲದೆ ತಾಲೂಕು, ರಾಜ್ಯ, ಅಂತರ್ರಾಜ್ಯ, ಅಂತರಾಷ್ಟ್ರೀಯ ಮಟ್ಟದ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿ ಬಹುಮಾನ,ಸನ್ಮಾನಗಳಿಗೂ ಭಾಜನರಾಗಿರುತ್ತಾರೆ.
ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಶ್ರೀಮತಿ ಮಂಜುಳಾರವರ ಸುಪುತ್ರರಾಗಿರುವ ಇವರು ಪ್ರಸ್ತುತ ಸಾಫಿಯೆನ್ಶಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ ಇಲ್ಲಿ ಅಂತಿಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ.