ನೆಲ್ಯಾಡಿ:ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಡಬ ಘಟಕದ ವತಿಯಿಂದ ನೆಲ್ಯಾಡಿ ಕ್ಲಸ್ಟರ್ ಮಟ್ಟದ “ಕಥೆ ಕವನ ರಚನಾ ಕಮ್ಮಟ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ಅಧ್ಯಕ್ಷರಾದ ಕೆ.ಸೇಸಪ್ಪ ರೈ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ನಿವೃತ್ತ ಗುರುಗಳಾದ ವೆಂಕಟರಮಣ ಆರ್ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ, ಕಲಾರತ್ನ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ ಕೆ., ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ, ಅತಿಥಿ ಶಿಕ್ಷಕಿ ಹಾಗೂ ಪ್ರತಿಲಿಪಿ ಸಾಹಿತಿಯಾದ ಶ್ರೀಮತಿ ನ್ಯಾನ್ಸಿ ಲಿಝಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಬೀದಿಮಜಲು, ಗ್ರಾಮ ಪಂಚಾಯತ್ ಸದಸ್ಯರಾದ ಸಲಾಂ ಬಿಲಾಲ್, ಶ್ರೀಮತಿ ಪುಷ್ಪಾ, ಶ್ರೀಮತಿ ಜಯಲಕ್ಷ್ಮಿ, ಶಾಲಾ ಮುಖ್ಯಗುರುಗಳಾದ ಶ್ರೀಮತಿ ಜೆಸ್ಸಿ ಕೆ.ಎ. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಓಬಳೇಶ್, ಶಿಕ್ಷಕರು ಹಾಗೂ ಕ.ಸಾ.ಪ. ಸದಸ್ಯರಾದ ಮಲ್ಲೇಶಯ್ಯ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಯಾದ ಪ್ರಕಾಶ್ ಬಾಕಿಲ ಸ್ವಾಗತಿಸಿದರು. ಸಹ ಶಿಕ್ಷಕಿಯಾದ ಶ್ರೀಮತಿ ಕಮಲಾಕ್ಷಿ ಕೆ ವಂದಿಸಿದರು. ಸಹ ಶಿಕ್ಷಕಿಯಾದ ಮಮತಾ ಸಿ.ಹೆಚ್. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಲೀಲಾವತಿ, ಶ್ರೀಮತಿ ಸಜಿನ ಕೆ.ಎ. ಶ್ರೀಮತಿ ಕವಿತಾ ಡಿ. ಅತಿಥಿ ಶಿಕ್ಷಕಿಯರಾದ ಶ್ರೀಮತಿ ತೀರ್ಥ ಪಿ.ವಿ ಹಾಗೂ ಶ್ರೀಮತಿ ರಂಜಿನಿ ಕುಂದರ್ ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಓಬಳೇಶ್ ಹಾಗೂ ಮಲ್ಲೇಶಯ್ಯ ಇವರು ವಿದ್ಯಾರ್ಥಿಗಳಿಗೆ ಕಥೆ ಹಾಗೂ ಕವನ ರಚಿಸುವ ಕುರಿತು ತರಬೇತಿ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ವಿಷಯ ನೀಡಿ ಕಥೆ ಹಾಗೂ ಕವಿತೆ ರಚಿಸಲು ತಿಳಿಸಲಾಯಿತು.
ಪ್ರಾಥಮಿಕ ಶಾಲಾ ವಿಭಾಗದ ಕಥಾ ರಚನಾ ಸ್ಪರ್ಧೆಯಲ್ಲಿ ಶ್ರೀರಾಮ ಶಾಲೆಯ ರೇಶ್ಮಿತಾ ಪ್ರಥಮ, ಪಡುಬೆಟ್ಟು ಪ್ರಾಥಮಿಕ ಶಾಲೆಯ ಐಶ್ವರ್ಯ ಗೌಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರೌಢಶಾಲಾ ವಿಭಾಗದಲ್ಲಿ ಪಡುಬೆಟ್ಟು ಸ.ಪ್ರೌ. ಶಾಲೆಯ ಹಂಸಿಕ ಪ್ರಥಮ, ಸ.ಉ.ಹಿ.ಪ್ರಾ.ಶಾಲೆ ನೆಲ್ಯಾಡಿಯ ಕಾವ್ಯ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಕವನ ರಚನಾ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಸ.ಹಿ.ಪ್ರಾ. ಶಾಲೆ ಪುಚ್ಚೇರಿಯ ಅಭಿಜ್ಞಾ ಪ್ರಥಮ, ಸ.ಉ.ಹಿ.ಪ್ರಾ. ಶಾಲೆ ನೆಲ್ಯಾಡಿಯ ಕುಶನ್ಯ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರೌಢಶಾಲಾ ವಿಭಾಗದಲ್ಲಿ ಪಡುಬೆಟ್ಟು ಸ.ಪ್ರೌ. ಶಾಲೆಯ ವಿಜೇತಾ ಪ್ರಥಮ, ಶ್ರೀರಾಮ ಶಾಲೆಯ ಮದ್ವಿತ್ ಹೆಗ್ಡೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಕ್ಲಸ್ಟರ್ ಹಂತದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕಥೆ ಕವನಾ ರಚನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.