ಮಾ 28, 29 ರಂದು ಕಡಬದಲ್ಲಿ ಉಚಿತ ದಂತ, ಕಣ್ಣು ತಪಾಸಣೆ ಹಾಗೂ ಕರು ಸಾಕಾಣಿಕ ಮಾಹಿತಿ ಶಿಬಿರ

ಶೇರ್ ಮಾಡಿ

ಕಡಬ,ಮಾ.೨೫: ಕಡಬ ಹಾಲು ಉತ್ಪಾದಕರ ಸಹಕಾರಿ ಸಂಘ , ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ದ.ಕ ಹಾಲು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮಾ ೨೮ ಹಾಗೂ ೨೯ ರಂದು ಉಚಿತ ದಂತ , ಕಣ್ಣು, ತಪಾಸನಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಕರು ಸಾಕಾಣಿಕಾ ಮಾಹಿತಿ ಶಿಬಿರ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಕಡಬ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ ಹೇಳಿದರು.

ಅವರು ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಿಬಿರದಲ್ಲಿ ಕಂಪ್ಯೂಟರೀಕೃತ ತಪಾಸನೆ, ಓದುವ ಕನ್ನಡ ಉಚಿತ, ಅವಶ್ಯಕತೆ ಇದ್ದವರಿಗೆ ಉತ್ತಮ ದರ್ಜೆಯ ಕನ್ನಡಕ ರಿಯಾತಿ ದರದಲ್ಲಿ ವಿತರಣೆ, ಹಲ್ಲಿನ ಗುಳಿ ತುಂಬುವಿಕೆ, ಹಲ್ಲಿನ ಸ್ವಚ್ಚತೆ, ಹಲ್ಲು ಕೀಳುವಿಕೆ, ಜೋಡನೆ ಮಾಡಲಾಗುವುದು. ಬಿಸಿಲಿನ ಬೇಗೆ ಇರುವುದರಿಂದ ಶಿಭಿರಾರ್ಥಿಗಳು ಬೆಳಿಗ್ಗೆ ಬೇಗನೆ ಬಂದು ನೋದಾಯಿಸಿಕೊಳ್ಳಬೇಕು ಹಾಗೂ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮಂಗಳೂರು ವಿಭಾಗದ ಕಾರ್ಯದರ್ಶಿ ರಾಜೇಂದ್ರ ರೈ ಬೆಳ್ಳಿಪ್ಪಾಡಿ ಉದ್ಘಾಟಿಸಲಿದ್ದಾರೆ. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ ಅಧ್ಯಕ್ಷತೆವಹಿಸಲಿದ್ದಾರೆ, ವೆನ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ|ಅನಿಲ್ ರಾಮಾನುಜಮ್, ಡಾ|ರಿಯಾ, ಸುಳ್ಯ ಕ,ವಿಜಿ ದಂತ ಕಾಲೇಜಿನ ದಂತ ವೈದ್ಯ ಡಾ|ಅಲ್ವಿನ್, ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ|ಸತೀಶ್ ರಾವ್, ಸಹಾಯಕ ವ್ಯವಸ್ಥಾಪಕ ಡಾ|ಸಚಿನ್, ವಿಸ್ತರಣಾಧಿಕಾರಿ ಆದಿತ್ಯ ಚಿದ್ಗಲ್ , ವಿಜಯ ಗ್ರಾಮಾಣಾಭಿವೃದ್ಧಿ ಪ್ರತಿಷ್ಠಾನದ ಕಡಬ ತಾಲೂಕು ಉಪಾಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಬ್ಯಾಂಕ್ ಆಫ್ ಬರೋಡಾದ ಕಡಬ ಶಾಖಾ ಮ್ಯಾನೇಜರ್ ಚಂದ್ರಹಾಸ ಮತ್ತಿತರರು ಅತಿಥಿಗಳಾಗಿ ಭಾಗವಹಿಲಿದ್ದಾರೆ ಎಂದು ತಿಳಿಸಿದ ಜಯಚಂದ್ರ ರೈ ಕರು ಸಾಕಾಣಿಕ ಮಾಹಿತಿ ಶಿಬಿರದಲ್ಲಿ ಕರುಗಳುಗೆ ಉಚಿತ ಜಂತುಹುಳದ ಔಷದಿ ಹಾಗೂ ಪೌಷ್ಠಿಕ ಆಹಾರ ವಿತರಣೆ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕುಂಙಣ್ಣ ಕುದ್ರಡ್ಕ, ವಿಜಯ ಗ್ರಾಣಾಭಿವೃದ್ಧಿ ಪ್ರತಿಷ್ಠಾನದ ಕಡಬ ಉಪಾಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಉಪಸ್ಥಿತರಿದ್ದರು.

Leave a Reply

error: Content is protected !!