ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆಯು ನೀರಿನ ಅಂಶವೇ ಇಲ್ಲದಂತೆ ಈ ಬಾರಿಯ ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋಗಿದೆ.
ಬಿಸಿ ನೀರ ಚಿಲುಮೆಯು ಸರಿ ಸುಮಾರು 36.6 ಡಿಗ್ರಿ ಉಷ್ಣಾಂಶವನ್ನು ಹೊಂದಿದ್ದು ಚರ್ಮರೋಗ ನಿವಾರಕ ಗುಣವನ್ನು ಹೊಂದಿದ್ದು ಇಲ್ಲಿ ಸ್ನಾನ ಮಾಡುವುದರಿಂದ ಬಹಳಷ್ಟು ಬಗೆಯ ಚರ್ಮ ವ್ಯಾಧಿಗಳು ಗುಣವಾಗುತ್ತಿದ್ದವು. ಬಹಳಷ್ಟು ಮಂದಿ ಇಲ್ಲಿನ ನೀರನ್ನು ಕ್ಯಾನ್‌ಗಳಲ್ಲಿ ತುಂಬಿಸಿ ಕೊಡೊಯ್ಯುತ್ತಿದ್ದರು.
ಇದೇ ಮೊದಲು ಈ ಪರಿಯಲ್ಲಿ ಬತ್ತಿರುವುದು. ನೀರೇ ಇಲ್ಲದ ಸ್ಥಳವೇನೋ ಎಂಬಂತೆ ತೋರುತ್ತಿದೆ. ಸತತ ಬಿಸಿಲ ಝಳ ದಿಂದ ಪರಿಸರದೆಲ್ಲೆಡೆ ಜಲ ಮೂಲಗಳು ಬತ್ತಲಾರಂಭಿಸಿದ್ದು, ಈ ಬಾರಿಯ ಬೇಸಗೆ ಭೀತಿ ಮೂಡಿದೆ.