ರಮಾನಾಥ ರೈ ಯವರಿಂದ ವರದಿ ಪಡೆಯಲು ಕೆಪಿಸಿಸಿ ಅಧ್ಯಕ್ಷರ ನಿರ್ಧಾರ
ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರ ವಾಗಿ ಎದ್ದಿರುವ ಗೊಂದಲ ನಿವಾರಣೆಗೆ ಇಂದು ನಂದಕುಮಾರ್ ಅಭಿಮಾನಿ ಬಳಗ ಮತ್ತು ಸುಳ್ಯ ಮತ್ತು ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯವರನ್ನು ಮತ್ತು ನಂದಕುಮಾರ್ ಹಾಗೂ ಕೃಷ್ಣಪ್ಪರನ್ನು ಮಾತುಕತೆಗೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಕೃಷ್ಣಪ್ಪರಿಗೆ ಘೋಷಣೆ ಮಾಡಿರುವ ಬಿ ಫಾರಂ ನ್ನು ಎರಡು ದಿನ ಕಾಯ್ದಿರಿಸಿದ್ದು, ಕೆಪಿಸಿಸಿ ತಂಡದಿಂದ ಮರು ಸರ್ವೇ ನಡೆಸಿ ವರದಿ ಪಡೆಯುವುದು ಮತ್ತು ಮಾಜಿ ಸಚಿವ ಬಿ. ರಮಾನಾಥ ರೈ ಯವರು ಸುಳ್ಯದಲ್ಲಿ ಸಭೆ ನಡೆಸಿ ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಈ ಎರಡೂ ವರದಿಯನ್ನು ಪರಿಗಣಿಸಿ ಬಿ ಫಾರಂ ನ್ನು ಪರಾಮರ್ಶೆ ನಡೆಸಿ ಅಧಿಕೃತ ಅಭ್ಯರ್ಥಿಗೆ ಬಿ ಫಾರಂ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ.