ಉದನೆ: ಕೆಎಸ್‌ಆರ್‌ಟಿಸಿ ಬಸ್ಸು, ಟೆಂಪೋ ಟ್ರಾವೆಲರ್ ಡಿಕ್ಕಿ, ಪ್ರಯಾಣಿಕನಿಗೆ ಗಾಯ

ಶೇರ್ ಮಾಡಿ

ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ ಪರಸ್ಪರ ಒರೆಸಿಕೊಂಡು ಹೋದ ಪರಿಣಾಮ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರೋರ್ವರು ಗಾಯಗೊಂಡಿರುವ ಘಟನೆ ಎ.18ರಂದು ಸಂಜೆ ನಡೆದಿದೆ.

ಹಾಸನ ತಾಲೂಕಿನ ಭುವನಹಳ್ಳಿ ನಿವಾಸಿ ಕೀರ್ತಿಕುಮಾರ್ ಕೆ.ಪಿ.(42ವ.) ಗಾಯಗೊಂಡವರಾಗಿದ್ದಾರೆ. ಕೆಎಸ್‌ಆರ್‌ಟಿಸಿ ಮಂಗಳೂರು 3ನೇ ಡಿಪ್ಪೊದಲ್ಲಿ ಚಾಲಕರಾಗಿದ್ದ ಕೀರ್ತಿಕುಮಾರ್‌ರವರು ಎ.18ರಂದು ರಜೆ ಇದ್ದುದರಿಂದ ತನ್ನ ಊರಾದ ಹಾಸನಕ್ಕೆ ಹೋಗಲೆಂದು ಮಂಗಳೂರಿನಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ (ಕೆಎ 19 ಎಫ್ 3570) ಹಿಂಬದಿ ಕೊನೆಯ ಸೀಟಿನ ಬಲ ಬದಿ ಕಿಟಿಕಿ ಬಳಿ ಕುಳಿತು ಪ್ರಯಾಣಿಸುತ್ತಿದ್ದರು. ಬಸ್ಸು ಶಿರಾಡಿ ಗ್ರಾಮದ ಉದನೆ ಸಮೀಪ ತಲುಪುತ್ತಿದ್ದಂತೆ ರಾ.ಹೆ 75ರಲ್ಲಿ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ಪ್ರಯಾಣಿಕ ವಾಹನವನ್ನು(ಕೆಎ 51 ಎಡಿ 4787)ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಬಲ ಬದಿಗೆ ಡಿಕ್ಕಿ ಹೊಡೆದು ಒರೆಸಿಕೊಂಡು ಹೋದ ಪರಿಣಾಮ ಬಸ್ಸಿನ ಹಿಂಬದಿ ಸೀಟಿನ ಬಲ ಬದಿ ಕಿಟಿಕಿ ಬಳಿ ಕುಳಿತಿದ್ದ ಕೀರ್ತಿಕುಮಾರ್‌ರವರ ಬಲ ಕೈಗೆ ಗಾಯವಾಗಿದೆ. ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!