ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಜುಲೈ ಸೆಷನ್ ನೋಂದಣಿ ಪ್ರಕ್ರಿಯೆ ಆರಂಭ.. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಶೇರ್ ಮಾಡಿ

ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಜುಲೈ 2023 ಸೆಷನ್‌ಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಯನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ನಡೆಸುತ್ತದೆ. ಈ ಪರೀಕ್ಷೆಯನ್ನು ಪ್ರತಿ ವರ್ಷ ಎರಡು ಬಾರಿ ನಡೆಸಲಾಗುತ್ತದೆ.

ಜುಲೈ 2023 ಸೆಷನ್, ಸಿಟಿಇಟಿ ಪರೀಕ್ಷೆಗೆ ಏಪ್ರಿಲ್ 27, 2023 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಸಿಟಿಇಟಿಗೆ ನೋಂದಣಿ ಮಾಡಿಕೊಳ್ಳಲು, ಮೇ 26, 2023 ರವರೆಗೆ ಅವಕಾಶ ನೀಡಲಾಗಿದ್ದು, ಮೇ 26, 2023ರ ವರೆಗೆ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://ctet.nic.in/ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬುದಾಗಿದೆ.

ಈ ಬಾರಿಯೂ ಸಿಟಿಇಟಿ ಪರೀಕ್ಷೆಯನ್ನು ಆನ್‌ಲೈನ್‌ ಮೊಡ್‌ನಲ್ಲಿ ನಡೆಸಲಾಗುತ್ತದೆ. ಜುಲೈ 2023 ಸೆಷನ್ ಪರೀಕ್ಷೆಯು, ಜುಲೈ-2023 ರಿಂದ ಆಗಸ್ಟ್ 2023 ರವರೆಗೆ ನಡೆಯಲಿದೆ. ಈ ಬಾರಿಯು ಸಿಟಿಇಟಿ ಪರೀಕ್ಷೆಯನ್ನು ದೇಶದಾದ್ಯಂತ 20 ಭಾಷೆಗಳಲ್ಲಿ ನಡೆಸಲಾಗುವುದು.

ಜುಲೈ 2023 ಸೆಷನ್ ಸಿಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್‌ https://ctet.nic.in/ ಗೆ ಭೇಟಿ ನೀಡಿ.
ಮುಖಪುಟದಲ್ಲಿ ‘ಜುಲೈ 2023 ಸೆಷನ್ ಸಿಟಿಇಟಿ ಪರೀಕ್ಷೆ’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮನ್ನು ನೋಂದಾಯಿಸಿಕೊಳ್ಳಿ.
ನೋಂದಣಿ ಮಾಡಿಕೊಂಡ ನಂತರ, ಜುಲೈ 2023 ಸೆಷನ್ ಸಿಟಿಇಟಿ ಪರೀಕ್ಷೆಯ ಅರ್ಜಿಯನ್ನು ಭರ್ತಿ ಮಾಡಿ.
ನಂತರ ಅಲ್ಲಿ ಕೇಳಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ.
ಆನ್‌ಲೈನ್‌ ಮೂಲಕ ಪರೀಕ್ಷಾ ಶುಲ್ಕವನ್ನು ಪಾವತಿಸಿ, ಸಬ್ಮಿಟ್ ನೀಡಿ.
ಅರ್ಜಿ ಸಲ್ಲಿಕೆ ಪೂರ್ಣವಾದ ಮೇಲೆ ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ತೆಗೆದುಕೊಳ್ಳಿ.

ಜುಲೈ 2023 ಸೆಷನ್ ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ – ರೂ.1000 (ಪೇಪರ್ 1 ಅಥವಾ 2 ಕ್ಕೆ), ರೂ.1200 (ಎರಡು ಪತ್ರಿಕೆಗಳಿಗೆ).
ಎಸ್ಸಿ /ಎಸ್ಟಿ/ PWD ಅಭ್ಯರ್ಥಿಗಳಿಗೆ – ರೂ.500 (ಪತ್ರಿಕೆ 1 ಅಥವಾ 2 ಕ್ಕೆ), ರೂ.600 (ಎರಡು ಪತ್ರಿಕೆಗಳಿಗೆ).

Leave a Reply

error: Content is protected !!