ನೇಸರ ಜ.2:ಅರಸಿನಮಕ್ಕಿ ಸಮೀಪದ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ಸಾಗಿದ್ದು. ಕ್ಷೇತ್ರದ ಸಾನ್ನಿಧ್ಯ ವೃದ್ಧಿ ಮತ್ತು ಲೋಕಕಲ್ಯಾಣಾರ್ಥವಾಗಿ ಮಾರ್ಚ್ 6ರಂದು ನವಚಂಡಿಕಾ ಯಾಗ ನಡೆಯಲಿದೆ.
ಶ್ರೀ ಅರಿಕೆಗುಡ್ಡೆ ಕ್ಷೇತ್ರದಲ್ಲಿ ಈ ಕುರಿತು ಜ.2ರಂದು ತಾಲೂಕು ಮಟ್ಟದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ನವಚಂಡಿಕಾಯಾಗ ಸಮಿತಿಯ ಅಧ್ಯಕ್ಷರಾಗಿ ಅರವಿಂದ ಕುಡ್ವರನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ,ಗೌರವ ಸಂಚಾಲಕರಾಗಿ ಜಯರಾಮ ನೆಲ್ಲಿತ್ತಾಯ,ಉಪಾಧ್ಯಕ್ಷರುಗಳಾಗಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ನವೀನ್ ನೆರಿಯ, ವಿಹಿಂಪ ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ, ಗ್ರಾಮವಾರು ಉಪಾಧ್ಯಕ್ಷರುಗಳಾಗಿ ಶಿಬಾಜೆ -ದಿನಕರ್ ಬರ್ಗುಳ, ಶಿಶಿಲ-ಕರುಣಾಕರ್,ಕಳೆಂಜ- ಚಂದ್ರಶೇಖರ್, ಧನಂಜಯ, ರೆಖ್ಯ -ಅಖಿಲೇಶ್, ಹತ್ಯಡ್ಕ -ರಾಜು ಕೆ.ಸಾಲ್ಯಾನ್, ಮಂಜುಳಾ ಕಾರಂತ್, ನಿಡ್ಲೆ – ಪ್ರವೀಣ್ ಹೆಬ್ಬಾರ್, ಕೊಕ್ಕಡ – ಮಮತಾ, ಗೌರವ ಸಲಹೆಗಾರರಾಗಿ ರವಿ ಭಟ್ ಪಜಿರಡ್ಕ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಡಾ.ಮೋಹನ್ ದಾಸ್ ಗೌಡ ಕೊಕ್ಕಡ, ಎಂ.ಪಿ.ರಾಜಗೋಪಾಲ್, ರಾಘವೇಂದ್ರ ನಾಯಕ್, ತ್ಯಾಂಪಣ್ಣ ಶೆಟ್ಟಿಗಾರ್, ಮಂಜುನಾಥ ಗೌಡ ಕೈಕುರೆ, ರವಿಚಂದ್ರ ಹೊಸೊಕ್ಲು,ಆಶಾ ಜೋಗಿತ್ತಾಯ, ಶ್ರೀನಿವಾಸ ಮೂಡೆತ್ತಾಯ ಶಿಶಿಲ, ಸುಂದರ ರಾಣ್ಯ, ಸಂದೀಪ್ ಶಿಶಿಲ, ನವೀನ್ ರೆಖ್ಯ, ರತೀಶ್ ಗೌಡ, ಕೇಶವ ರಾಮ್ ಸರ್ಪಂಗಳ, ಅವಿನಾಶ್ ಭಿಡೆ, ಶ್ರೀಕರ ರಾವ್ ಅಡ್ಕಾರಿ, ಪ್ರೇಮಚಂದ್ರ ರಾವ್ ಪೆರ್ಲ, ಈಶ್ವರ ಶೆಟ್ಟಿಗಾರ್, ಗಣೇಶ್ ಹೊಸ್ತೋಟ ಇವರನ್ನು ಆಯ್ಕೆ ಮಾಡಲಾಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್, ಕೊಕ್ಕಡ ವೈದ್ಯನಾಥೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಗ್ರಾ.ಯೋಜನೆಯ ವಲಯ ಮೇಲ್ವಿಚಾರಕಿ ಮಮತಾ, ಹಿರಿಯ ವೈದ್ಯರಾದ ಡಾ.ಮೋಹನ್ ದಾಸ್ ಗೌಡ ಕೊಕ್ಕಡ, ನವೀನ್ ನೆರಿಯ, ಸುಬ್ರಹ್ಮಣ್ಯ ಕುಮಾರ್ ಅಗರ್ತ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೈತ್ರಾ, ನಿಶಿತಾ, ಹರ್ಷಿತಾ, ಪ್ರಣೀತಾ ಪ್ರಾರ್ಥಿಸಿದರು. ಆಡಳಿತ ಸಮಿತಿ ಕೋಶಾಧಿಕಾರಿ ಮುರಳೀಧರ್ ಪಾಲೆಂಜ ಸ್ವಾಗತಿಸಿದರು. ಕೇಶವ ರಾವ್ ನೆಕ್ಕಿಲು ವಿಜ್ಞಾಪನಾ ಪತ್ರ ವಾಚಿಸಿದರು. ಮುರಳೀಧರ ಶೆಟ್ಟಿಗಾರ್ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿದರು.
ಜ.16ರಂದು ಬೆಳಿಗ್ಗೆ 8.30ಕ್ಕೆ ಗರ್ಭಗುಡಿಯ ಭವ್ಯ ಶಿಲಾ ಮೆರವಣಿಗೆ ಉಪ್ಪರಡ್ಕದಿಂದ ನಡೆಯಲಿದೆ.