ಬಂಟ್ವಾಳ: ಪಾರ್ಸೆಲ್ ನೀಡುವ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೋರ್ವ ಮಹಿಳೆಯ ಕತ್ತಿಯಿಂದ ಕರಿಮಣಿ ಸರವನ್ನು ಎಗರಿಸಿದ ಘಟನೆ ಬಂಟ್ವಾಳ ರಾಯರಚಾವಡಿಯಲ್ಲಿ ನಡೆದಿದೆ.
ರಾಯರಚಾವಡಿ ನಿವಾಸಿ ಇಂದಿರಾ ಅವರು ಮನೆಯಲ್ಲಿದ್ದ ವೇಳೆ ಪಾರ್ಸೆಲ್ ಇದೆ ಎಂದು ಮನೆಗೆ ಆಗಮಿಸಿದ್ದು, ಈ ವೇಳೆ ಕರಿಮಣಿ ಸರ ಎಗರಿಸಿದ್ದಾನೆ.
ಕರಮಣಿ ಸರ ಕಳ್ಳತನ ಮಾಡಿರುವ ದೃಶ್ಯ ಮನೆಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಸುಮಾರು 4 ಪವನಿನ ಕರಿಮಣಿ ಸರ ಅದಾಗಿದ್ದು, ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.