





ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ಸೋಮವಾರ ರಾತ್ರಿ ಕಾಡಾನೆಗಳ ಹಿಂಡು ಕೃಷಿ ತೋಟಗಳಿಗೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಉಂಟಾಗಿದೆ.

ಕೋಮಲಾ ಕರುಣಾಕರ ಎಂಬವರ ತೋಟದ 100ಕ್ಕಿಂತ ಅಧಿಕ ಅಡಕೆ ಮರ, ಗಿರೀಶನ್ ಎಂಬವರ ತೋಟದ 25 ಅಡಕೆ ಮರಗಳನ್ನು ಧ್ವಂಸ ಮಾಡಿವೆ.

ದಾಳಿ ನಡೆಸಿದ ಕಾಡಾನೆಗಳ ಹಿಂಡಿನಲ್ಲಿ ಮರಿಯಾನೆ ಸಹಿತ ನಾಲ್ಕಕ್ಕಿಂತ ಅಧಿಕ ಆನೆಗಳು ಇರುವ ಶಂಕೆ ವ್ಯಕ್ತವಾಗಿದೆ.
ಅರಣ್ಯ ಇಲಾಖೆಯ ಚಾರ್ಮಾಡಿ ಉಪವಿಭಾಗದ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿಕೃಷಿ ನಷ್ಟ ಬಗ್ಗೆ ಸರಕಾರದಿಂದ ಸಿಗುವ ಪರಿಹಾರ ಮಂಜೂರಾತಿಗೆ ಅಗತ್ಯ ಮಾಹಿತಿಯನ್ನು ನೀಡಿದ್ದಾರೆ.