ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನವು ಮುಕ್ತಾಯಗೊಂಡಿದ್ದು, ಚುನಾವಣಾ ನಂತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಪ್ರತಿಪಾದಿಸಿದ್ದಾಗಿ ndtv.com ವರದಿ ಮಾಡಿದೆ.
ರಿಪಬ್ಲಿಕ್ ಟಿವಿ- ಪಿ ಮಾರ್ಕ್ ಬಿಜೆಪಿ 85-100, ಕಾಂಗ್ರೆಸ್ 94-108, ಜೆಡಿಎಸ್ 24-32 ಹಾಗೂ ಇತರ 2-6 ಸೀಟುಗಳನ್ನು ಗಳಿಸಲಿದೆ ಎಂದು ಹೇಳಿದರೆ, ಟಿವಿ9- ಪೋಲ್ ಸ್ಟ್ರಾಟ್ ಬಿಜೆಪಿ 88-98, ಕಾಂಗ್ರೆಸ್ 99-109, ಜೆಡಿಎಸ್ 21-26 ಹಾಗೂ ಇತರ 0-4 ಸೀಟುಗಳನ್ನು ಗಳಿಸಲಿದೆ ಎಂದಿದೆ. ಇನ್ನು ಝೀ ನ್ಯೂಸ್ ಮಾರ್ಟೈಝ್ ಏಜೆನ್ಸಿಯು ಬಿಜೆಪಿ 79-94, ಕಾಂಗ್ರೆಸ್ 103-118, ಜೆಡಿಎಸ್ 25-33 ಹಾಗೂ ಇತರ 2-5 ಸೀಟುಗಳನ್ನು ಗಳಿಸಲಿದೆ ಎಂದಿದ್ದಾಗಿ ವರದಿ ಉಲ್ಲೇಖಿಸಿದೆ.
ಟಿವಿ9- ಸಿ- ವೋಟರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 100-112, ಬಿಜೆಪಿ 83-95 ,ಜೆಡಿಎಸ್ – 21-29, ಇತರರು – 2-6 ಸೀಟುಗಳನ್ನು ಗಳಿಸಲಿದೆ ಎಂದು ಹೇಳಿದೆ.