ಮಂಗಳೂರು: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಭದ್ರವಾಗಿಸಿರುವ ಸುರತ್ಕಲ್ ಎನ್ಐಟಿಕೆ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ರೂಮ್ನ ‘ಕೀ’ ಕಾಣೆಯಾಗಿರುವುದಾಗಿ ವರದಿಯಾಗಿದೆ.
ಅಧಿಕಾರಿಗಳ ಬೇಜಾವಬ್ದಾರಿಯಿಂದಾದ ಈ ಪ್ರಮಾದಕ್ಕೆ ಸಿಬ್ಬಂದಿ ಸ್ಟ್ರಾಂಗ್ ರೂಮ್ನ ಬಾಗಿಲು ತೆರೆಯಲು ಪರದಾಡಿದರು. ಬಳಿಕ ಬೀಗ ಒಡೆದು ಸ್ಟ್ರಾಂಗ್ ರೂಮ್ನ ಬಾಗಿಲು ತೆರೆಯಲಾಯಿತು ಎಂದು ಹೇಳಲಾಗಿದೆ.