ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ; ಟ್ರಾಫಿಕ್‌ ಜಾಮ್

ಬೆಳ್ತಂಗಡಿ: ಬೇಸಗೆ ರಜೆಯಾದ್ದರಿಂದ ಜಿಲ್ಲೆಯ ಪ್ರವಾಸಿ ಕೇಂದ್ರ ಸಂದರ್ಶಿಸಲು ಇತರೆಡೆಗಳಿಂದ ಪ್ರವಾಸಿಗರು ಬರುತ್ತಿರುವುದರಿಂದ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಾಹನ ದಟ್ಟಣೆ ಉಂಟಾಗಿದೆ.

ಈ ಮಧ್ಯೆ ರವಿವಾರ ಸಂಜೆ ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ಅರುಣಾಚಲ ಪ್ರದೇಶ ನೋಂದಣಿಯ ಸ್ಲಿàಪರ್‌ ಬಸ್‌ ಸಿಲುಕಿದ ಕಾರಣ ವಾಹನಗಳು ಕಿ.ಮೀ. ಗಟ್ಟಲೆ ದೂರಕ್ಕೆ ಸಾಲಿನಲ್ಲಿ ನಿಲ್ಲಬೇಕಾಯಿತು.

ಚಿಕ್ಕಮಗಳೂರಿನ ಬೈಕ್‌ ಸವಾರ ವಿದ್ಯಾರ್ಥಿ ಡೇನಿಯಲ್‌ ಹಾಗೂ ಕೆಲವು ವಾಹನ ಸವಾರರು ಸೇರಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

ಚಾರ್ಮಾಡಿಯಲ್ಲಿ ಘನವಾಹನ ಸಹಿತ ಸ್ಲಿಪರ್‌ ಬಸ್‌ ಸಂಚಾರಕ್ಕೆ ಅನುಮತಿ ಇಲ್ಲದಿದ್ದರೂ ಕೊಟ್ಟಿಗೆಹಾರ ಕಡೆ ಹೋಗಲು ಈ ಬಸ್‌ ಚಾರ್ಮಾಡಿ ಪೊಲೀಸ್‌ ಗೇಟ್‌ ಮೂಲಕವೇ ಸಂಚಾರ ನಡೆಸಿದೆ.

Leave a Reply

error: Content is protected !!