ನೆಲ್ಯಾಡಿ: ಕ್ಯಾಂಪ್ಕೋ ಶಾಖೆ ಉದ್ಘಾಟನೆ ಮತ್ತು ಸದಸ್ಯ ಬೆಳೆಗಾರರ ಸಭೆ

ಶೇರ್ ಮಾಡಿ

ನೇಸರ ಜ.7: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಕ್ಯಾಂಪ್ಕೋ ನೂತನ ಶಾಖೆಯ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಯವರು ಅಡಿಕೆಯು ಕ್ಯಾನ್ಸರ್ ಕಾರಕ ವಲ್ಲ,ಇದರಿಂದ ಯಾವುದು ಹಾನಿಯೂ ಇಲ್ಲ ಎಂಬುದರ ಬಗ್ಗೆ ಸೂಕ್ತ ಪುರಾವೆಯನ್ನು ಸುಪ್ರೀಂಕೋರ್ಟ್ ಗೆ ಮುಂದಿನ ದಿನಗಳಲ್ಲಿ ಒದಗಿಸಲಾಗುವುದು,ರೈತರು ಬೆಳೆದ ಉತ್ಪನ್ನಗಳಲ್ಲಿ ಶೇಕಡಾ 10ರಿಂದ 12ರಷ್ಟು ಮಾತ್ರ ಕ್ಯಾಂಪ್ಕೋ ಸಂಸ್ಥೆಗೆ ಅಡಿಕೆ ಬರುತ್ತಿದ್ದು ಉಳಿದವುಗಳು ಖಾಸಗಿಯವರಿಗೆ ಮಾರಾಟವಾಗುತ್ತಿದೆ ಎಂದರು. ಕ್ಯಾಂಪ್ಕೋ ಸಂಸ್ಥೆಯು ರೈತರ ಪರವಾಗಿದ್ದು, ಸದಸ್ಯರಿಗೆ ಆರೋಗ್ಯ ಸಂಬಂಧಿ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ, ನಮ್ಮ ಸಂಸ್ಥೆಯ ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿದೆ ಎಂದರು.

ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್.ಕೃಷ್ಣಕುಮಾರ್ ಅವರು ಮಾತನಾಡಿ ನಮ್ಮ ಹೊಸ ಯೋಜನೆಯಾದ “ಕ್ಯಾಂಪ್ಕೋ ಆನ್ ವಿಲ್” ಕಾರ್ಯಕ್ರಮದಲ್ಲಿ ಸಂಸ್ಥೆಯ ನುರಿತ ಸಿಬ್ಬಂದಿಗಳು ರೈತರ ಮನೆ ಮನೆಗೆ ಭೇಟಿ ಕೊಟ್ಟು ಅಡಿಕೆ ಖರೀದಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ಉತ್ತರಭಾರತದ ನಾಲ್ಕು ಕಡೆ ಸೇಲ್ಸ್ ಡಿಪೋ ಆರಂಭಿಸಲಾಗಿದೆ.ಕಾವು ಎಂಬಲ್ಲಿ ಬೃಹತ್ ಗೋದಾಮು ಮಾಡಲಾಗಿದೆ ಎಂದರು.
ಕ್ಯಾಂಪ್ಕೋ ಡಿಸಿಎಂ ರವೀಶ್ ಅವರು ಸಂಸ್ಥೆಯಿಂದ ಸದಸ್ಯರುಗಳಿಗೆ ಸಿಗುವ ಸೇವಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಕ್ಯಾಂಪ್ಕೋ ಸದಸ್ಯರಾದ ದಯಾಕರ.ರೈ, ಪುಷ್ಪರಾಜ್,ಕಮಲಾಕ್ಷ ಪಂಡಿತ್,ದಿವಾಕರ ಗೌಡ,ಅಗ್ರಳ ನಾರಾಯಣ ರೈ ಮೊದಲಾದವರು ಸಲಹೆ ಸೂಚನೆಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಮುಖ್ಯ ಅತಿಥಿಗಳಾದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ,ಗ್ರಾಮ ಪಂಚಾಯಿತ್ ಅಧ್ಯಕ್ಷೆ ಚೇತನಾ ರವರು ಶುಭ ಹಾರೈಸಿದರು.
ಕ್ಯಾಂಪ್ಕೋ ದ ನಿರ್ದೇಶಕ ರಾಘವೇಂದ್ರ ಭಟ್,ಎಜಿಎಂ ರಾಘವೇಂದ್ರ,ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಗೋವಿಂದಭಟ್,ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರನ್ನು ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ರವರು ಶಾಲು ಹಾಕಿ,ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು,ಜಯಾನಂದ ಬಂಟ್ರಿಯಾಲ್,ಸರ್ವೋತ್ತಮ ಗೌಡ,ಸುದರ್ಶನ್, ಉಷಾ ಅಂಚನ್,ಎನ್.ವಿ ವ್ಯಾಸ,ಕುಶಾಲಪ್ಪಗೌಡ ಪೂವಾಜೆ,ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ಎಡಪಡಿತ್ತಾಯ,ನಿವೃತ್ತ ಮೆನೇಜರ್ ಸತೀಶ್ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂ.ಮಹೇಶ್ ಚೌಟ ಸ್ವಾಗತಿಸಿ, ಉಪಾಧ್ಯಕ್ಷ ಶಂಕರನಾರಾಯಣಭಟ್ ಖಂಡಿಗೆ ವಂದಿಸಿದರು.ಅಭಿಜ್ಞಾ,ಅನ್ವಿ ಪ್ರಾರ್ಥಿಸಿದರು.ನಿತಿನ್ ಕಾರ್ಯಕ್ರಮ ನಿರೂಪಿಸಿದರು. ಉದಯಕುಮಾರ್,ಜನಾರ್ಧನ, ವಿನೋದ್ ಶೆಟ್ಟಿ ಸಹಕರಿಸಿದರು.

ಜಾಹೀರಾತು

Leave a Reply

error: Content is protected !!