ನೆಲ್ಯಾಡಿ: ಸ.ಉ.ಹಿ.ಪ್ರಾಥಮಿಕ ಶಾಲೆಯ ಶಾಲಾ ಮಂತ್ರಿಮಂಡಲದ ಚುನಾವಣೆ

ಶೇರ್ ಮಾಡಿ

ನೆಲ್ಯಾಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮಂತ್ರಿಮಂಡಲದ ಚುನಾವಣೆಯು ಇವಿಎಂ APP ಬಳಸಿ ಯಶಸ್ವಿಯಾಗಿ ನಡೆಯಿತು.

ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಚುನಾವಣಾ ಪ್ರಚಾರ, ಅಣಕು ಮತದಾನ, ಏಜೆಂಟ್ ನೇಮಕ ಸೇರಿದಂತೆ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಯನ್ನು ಪರಿಚಯಿಸಲಾಯಿತು.
ಶಾಲಾ ನಾಯಕಿಯಾಗಿ ಫಾತಿಮತ್ ಇಬಾ, ಉಪನಾಯಕನಾಗಿ ಯಶವಂತ್ ಇವರು ಆಯ್ಕೆ ಆದರು. ಮುಖ್ಯ ಗುರುಗಳಾದ ಆನಂದ ಅಜಿಲ ಇವರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಚುನಾವಣೆಯು ನಡೆಯಿತು
.

Leave a Reply

error: Content is protected !!