ನೆಲ್ಯಾಡಿ: ಇಲ್ಲಿನ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು.
ಸುಮಾರು 70ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿವಿಧ ಭಂಗಿಯ ಯೋಗಾಸನವನ್ನು ಪ್ರದರ್ಶಿಸಿದರು. ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಮಹಮ್ಮದ್ ಹ್ಯಾರಿಸ್ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಯೋಗಭ್ಯಾಸವನ್ನು ಕಲಿಸಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜಾರ್ಜ್ ವಿದ್ಯಾ ಸಂಸ್ಥಗಳ ಸಂಚಾಲಕರಾಗಿರುವ ರೆ.ಫಾ.ನೋಮಿಸ್ ಕುರಿಯಾಕೋಸ್ ವಹಿಸಿ ಎಲ್ಲಾ ಯೋಗಪಟುಗಳಿಗೆ ಶುಭ ಹಾರೈಸಿದರು ಜೊತೆಗೆ ಯೋಗ ನಿರಂತರವಾಗಿ ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಉಲಹನ್ನನ್ ಪಿ.ಯು ಅವರು ಉಪಸ್ಥಿತರಿದ್ದು ಯೋಗಾಸನದಿಂದ ವಿದ್ಯಾರ್ಥಿಗಳಿಗಾಗುವ ಪ್ರಯೋಜನಗಳನ್ನು ಮನದಟ್ಟು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ ಏಲಿಯಾಸ್, ಕನ್ನಡ ಮಾಧ್ಯಮದ ಮುಖ್ಯ ಗುರುಗಳಾದ ಎಂ.ಐ ತೋಮಸ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಹರಿಪ್ರಸಾದ್ ಹಾಗೂ ವಿದ್ಯಾಸಂಸ್ಥೆಯ ಎಲ್ಲಾ ಉಪನ್ಯಾಸಕರು ಅಧ್ಯಾಪಕರು ಉಪಸ್ಥಿತರಿದರು. ಉಪನ್ಯಾಸಕರಾದ ಮಧು ಎ.ಜೆ. ಸ್ವಾಗತಿಸಿ ಶಿಕ್ಷಕಿಯಾಗಿರುವ ಶ್ರೀಮತಿ ಅನುಷಾ ವಂದಿಸಿದರು. ಕಾರ್ಯಕ್ರಮವನ್ನು ಕನ್ನಡ ಮಾಧ್ಯಮದ ಕಾರ್ಯಕ್ರಮ ಸಂಯೋಜಕಿಯಾಗಿರುವ ಶ್ರೀಮತಿ ಪ್ರಫುಲ್ಲ ನಿರೂಪಿಸಿದರು.