ಉದನೆ: ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ನ ನೂತನ ತರಗತಿ ಕೊಠಡಿಗಳ ಉದ್ಘಾಟನೆ, ಎಲ್ ಕೆ.ಜಿ, ಯುಕೆಜಿ ಪುಟಾಣಿಗಳ ಪ್ರವೇಶೋತ್ಸವ,ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಪುಟಾಣಿಗಳನ್ನು ವಾದ್ಯಘೋಷ, ದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ರೆ.ಫಾ.ಹನಿ ಜೇಕಬ್, ಮಗುವಿನ ಜೀವನದಲ್ಲಿ ಬಾಲ್ಯ ಹೆಚ್ಚಿನ ಪಾಮುಖ್ಯತೆ ಹೊಂದಿದೆ. ಬಾಲ್ಯದ ಕಲಿಕೆ ಉಲ್ಲಾಸದಾಯಕವಾಗಿರಬೇಕು. ಆ ಕಾರಣದಿಂದ ಕಿಂಡರ್ ಗಾರ್ಡನ್ ನವೀಕರಿಸಿ ವಿದ್ಯಾರ್ಥಿಗಳಿಗೆ ದೈಹಿಕ ಮಾನಸಿಕ ಉಲ್ಲಾಸವನ್ನು ನೀಡುವ ಸರ್ವ ಪ್ರಯತ್ನವನ್ನು ಸಂಸ್ಥೆ ಮಾಡಲಿದೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಿರಾಡಿ ಗ್ರಾಮಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ವಿನುತಾ ಮಾತನಾಡಿ, ಸಂಸ್ಥೆಯು ಶೈಕ್ಷಣಿಕವಾಗಿ ಉತ್ತಮ ಹೆಸರು ಪಡೆದಿದೆ. ಈ ಕೀರ್ತಿ ಗೆ ಸಂಸ್ಥೆಯ ಎಲ್ಲರ ಶ್ರಮವೇ ಕಾರಣ ಎಂದು ಶುಭ ಹಾರೈಸಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಭಾಸ್ಕರ ಗೌಡ ಎಸ್, ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಸ್ಥರಾದ ಶ್ರೀಧರ ಗೌಡ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿವೃಂದ, ಹಾಗೂ ಪಾಲಕರು ಉಪಸ್ಥಿತರಿದ್ದರು. ಆಡಳಿತ ಅಧಿಕಾರಿಗಳಾದ ಜಾನ್ ಕೆ ಎಲ್ಲರನ್ನು ಸ್ವಾಗತಿಸಿದರು. ಸಹಶಿಕ್ಷಕರಾದ ಯಶೋಧರ ಕಾರ್ಯಕ್ರಮ ನಿರೂಪಿಸಿದರು.