ಕೌಕ್ರಾಡಿ: ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ದಿನಾಂಕ 24-06-2023 ರಂದು ಚರ್ಚ್ ಪಾಲಕರ ಹಬ್ಬ ಹಾಗೂ ಪಾಲನ ಸಮಿತಿಯ ಸುವರ್ಣ ಮಹೋತ್ಸವದ ಆಚರಣೆಯನ್ನು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಪವಿತ್ರ ಬಲಿಪೂಜೆಯೊಂದಿಗೆ ಪ್ರಾರಂಭಿಸಲಾಯಿತು.
ಬಳಿಕ ಚರ್ಚ್ ಸಭಾಭವನದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ವಿಕಾರ್ ಜೆರಾಲ್ ರವರಾದ ವಂದನೀಯ ಮ್ಯಾಕ್ಷಿಂ ನೊರೊನ್ಹಾರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಈವರೆಗೆ ದೇವಾಲಯದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಚರ್ಚ್ ಆಡಳಿತದಾರರು, ಉಪಾಧ್ಯಕ್ಷರು, ಕಾರ್ಯಾದರ್ಶಿಗಳು ಹಾಗೂ ಗುರಿಕಾರರನ್ನು ಗುರುತಿಸಿ ಸನ್ಮಾನಿಸಲಾಯಿತು.
ದಿವಂಗತರನ್ನು ಸ್ಮರಿಸಿ ಅವರ ಸೇವೆಗೆ ಸಲ್ಲಬೇಕಾದ ಗೌರವವನ್ನು ಕುಟುಂಬದವರಿಗೆ ನೀಡಲಾಯಿತು. ಈ ದೇವಾಲಯದ ವ್ಯಾಪ್ತಿಯಲ್ಲಿನ ಕುಟುಂಬದಿಂದ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಪರವಾಗಿ ಇಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಂದನೀಯ ಫಾ.ಅಶೋಕ್ ಡಿಸೋಜರವರನ್ನು ಮತ್ತು ಪ್ರಸ್ತುತ ಚರ್ಚ್ ನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ವಂದನೀಯ ಫಾ.ಜಗದೀಶ್ ಲೂಯಿಸ್ ಪಿಂಟೊ ರವರನ್ನು ಹಾಗೂ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಂದನೀಯ ಫಾ.ಮ್ಯಾಕ್ಷಿಂ ನೊರೊನ್ಹಾರವರನ್ನು ಸನ್ಮಾನಿಸಲಾಯಿತು.
ಸನ್ಮಾನಿತ ಧರ್ಮಗುರುಗಳು ಎಲ್ಲಾ ಭಕ್ತಾದಿಗಳಿಗೆ ಹಬ್ಬದ ಶುಭಾಶಯದೊಂದಿಗೆ ತಮ್ಮ ಸಂದೇಶವನ್ನು ನೀಡಿದರು. ವೇದಿಕೆಯಲ್ಲಿ ಫಾ.ಮ್ಯಾಕ್ಷಿಂ ನೊರೊನ್ಹಾ, ಫಾ.ಜಗದೀಶ್ ಪಿಂಟೊ, ಫಾ.ಅಶೋಕ್ ಡಿ’ಸೋಜ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಪ್ರವೀಣ್ ನೋಯೆಲ್ ಮೊಂತೇರೊ, ಕಾರ್ಯದರ್ಶಿ ಶ್ರೀಮತಿ ವೀಣಾ ಮಾಡ್ತ, ಮಂಗಳೂರು ಧರ್ಮಪ್ರಾಂತ್ಯದ ಪಾಲನ ಸಮಿತಿ ಸದಸ್ಯರಾದ ವಿನ್ಸೆಂಟ್ ಮಿನೇಜಸ್ ಹಾಗೂ ಚರ್ಚ್ ನ ಎಲ್ಲಾ ಆಯೋಗದ ಸಂಚಾಲಕರಾದ ಶ್ರೀಮತಿ ವಿನ್ನಿ ಫ್ರೆಡ್ ಕ್ಲಾರಾ ಡಿಸೋಜ ರವರು ಉಪಸ್ಥಿತರಿದ್ದರು.
ಪ್ರವೀಣ್ ನೋಯೆಲ್ ಮೊಂತೇರೊರವರು ಸ್ವಾಗತಿಸಿ, ಶ್ರೀಮತಿ ವೀಣಾ ಮಾಡ್ತರವರು ವಂದಿಸಿದರು. ಶ್ರೀಮತಿ ಜೆನೆವಿವ್ ಫೆರ್ನಾಂಡಿಸ್ ಮತ್ತು ಶ್ರೀಮತಿ ಶಾಂತಿ ಪ್ರಿಯ ಡಿಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಭೋಜನದೊಂದಿಗೆ ಸಂಭ್ರಮದ ಆಚರಣೆಯು ಮುಕ್ತಾಯಗೊಂಡಿತು.