ಬೆಳ್ತಂಗಡಿ: ಉಜಿರೆಯ ಖಾಸಗಿ ಲಾಡ್ಜ್ ಒಂದರಲ್ಲಿ ಅವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.29 ರಂದು ಬೆಳಕಿಗೆ ಬಂದಿದೆ.
ಜೂನ್ 26 ರಂದು ಲಾಡ್ಜ್ ನಂಬರ್ 303 ರಲ್ಲಿ ರೂಂ ಪಡೆದುಕೊಂಡು ಉಳಿದುಕೊಂಡಿದ್ದರು. ಜೂನ್ 28 ರಂದು ರೂಂ ಒಳಗೆ ಹಗ್ಗವನ್ನು ಫ್ಯಾನ್‌ಗೆ ಹಾಕಿ ಪ್ಲಾಸ್ಟಿಕ್ ಕುರ್ಚಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್ 29 ರಂದು ಸಿಬ್ಬಂದಿಗಳು ಬಾಗಿಲು ಬಡಿದರೂ ಕಾರ್ತಿಕ್ ರೂಂ ನಿಂದ ಹೊರಬಾರದೆ ಇದ್ದಾಗ, ಅನುಮಾನದಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳ್ಕಕೆ ಆಗಮಿಸಿದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ ಹಾಗೂ ತಂಡ ಲಾಡ್ಜ್ ಗೆ ತೆರಳಿ ರೂಂನ ಬಾಗಿಲು ಒಡೆದು ಒಳಗೆ ಹೋದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಕಾರ್ತಿಕ್ ಮನೆಯವರನ್ನು ದೂರವಾಣಿ ಸಂಪರ್ಕಿಸಿದ್ದು. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.