ನರ್ಸ್ ಜತೆ ಸಂಭೋಗ ನಡೆಸುತ್ತಿರುವ ಸಂದರ್ಭದಲ್ಲಿಯೇ ರೋಗಿಯೊಬ್ಬ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ನರ್ಸ್ ಕೆಲಸದಿಂದ ವಜಾಗೊಂಡಿರುವ ಪ್ರಕರಣವೊಂದು ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.
ಯುನೈಟೆಡ್ ಕಿಂಗ್ಡಂನ ವೇಲ್ಸ್ ನ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಪೆನೆಲೋಪ್ ವಿಲಿಯಮ್ಸ್ (42) ಎಂಬಾಕೆ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು.
ಆಗಾಗ ರೋಗಿಯನ್ನು ಭೇಟಿಯಾಗುತ್ತಿದ್ದ ನರ್ಸ್, ಆತನೊಂದಿಗೆ ಕೆಲ ಕ್ಷಣವನ್ನು ಕಳೆಯುತ್ತಿದ್ದಳು. ನರ್ಸ್ ಪೆನೆಲೋಪ್ ವಿಲಿಯಮ್ಸ್ ರೋಗಿಯೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ ಎಂದು ಆಕೆಯ ಸಹದ್ಯೋಗಿಗಳಿಗೂ ತಿಳಿದಿತ್ತು. ಹೀಗೆ ಮಾಡಬೇಡ ಎಂದು ಆಕೆಗೆ ಸಲಹೆ ನೀಡಿದ್ದರೂ, ಅದನ್ನು ಆಕೆ ನಿರ್ಲಕ್ಷಿಸಿದ್ದಳು ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ನರ್ಸ್ ರೋಗಿಯನ್ನು ಕೆಳಕ್ಕೆ ಕರೆದಿದ್ದಾಳೆ. ಪಾರ್ಕಿಂಗ್ ಏರಿಯಾದಲ್ಲಿ ಕಾರೊಂದರಲ್ಲಿ ಇಬ್ಬರು ದೈಹಿಕ ಸಂಪರ್ಕದಲ್ಲಿದ್ದ ವೇಳೆ ರೋಗಿ ಕುಸಿದು ಹೃದಯಸ್ತಂಭನಕ್ಕೊಳಗಾಗಿ ಮೃತಪಟ್ಟಿದ್ದ. ನರ್ಸ್ ಆಂಬ್ಯುಲೆನ್ಸ್ ಗೆ ಕರೆ ಮಾಡುವ ಬದಲು ಆಕೆ ತನ್ನ ಸಹದ್ಯೋಗಿಯನ್ನು ಕರೆದಿದ್ದಾಳೆ. ವೈದ್ಯಕೀಯ ತುರ್ತು ಸಿಬ್ಬಂದಿ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ, ಭಾಗಶಃ ಬೆತ್ತಲಾಗಿ ಬಿದ್ದಿರುವ ರೋಗಿಯನ್ನು ನೋಡಿದ್ದಾರೆ. ಈ ವೇಳೆ ಇಡೀ ಆಸ್ಪತ್ರೆಗೆ ವಿಚಾರ ಗೊತ್ತಾಗಿದೆ.
ರೋಗಿ ಆತನ ಆರೋಗ್ಯ ಸ್ಥಿತಿಯ ಬಗ್ಗೆ ನನಗೆ ಸಂದೇಶ ಕಳುಹಿಸಿದ ಬಳಿಕ ಆತನನ್ನು ನೋಡಲು ಹೋಗಿದ್ದೆ. ನಾವು 40-45 ನಿಮಿಷ ಮಾತನಾಡಿದ್ದೇವೆ ಅಷ್ಟೇ ಎಂದು ವಿಚಾರಣೆ ವೇಳೆ ನರ್ಸ್ ಸುಳ್ಳು ಹೇಳಿದ್ದಳು.
ಇದಾದ ಬಳಿಕ ಆಕೆ ರೋಗಿಯೊಂದಿಗೆ ಸಂಬಂಧವಿರುವುದನ್ನು ಒಪ್ಪಿಕೊಂಡಳು. ಸಂಭೋಗ ನಡೆಸುವ ಉದ್ದೇಶದಿಂದ ಆತನನ್ನು ಕರೆದಿದ್ದೆ. ಆತನಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟ ಎಂದು ತಿಳಿಸಿದ್ದಾಳೆ. ಆ ಬಳಿಕ ಆಕೆಯನ್ನು ಆಸ್ಪತ್ರೆಯ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ವರದಿ ತಿಳಿಸಿದೆ. ರೋಗಿಗೆ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯೂ ಇತ್ತು ಎಂದು ವರದಿ ತಿಳಿಸಿದೆ.