ಉಡುಪಿ :ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗದ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಉಡುಪಿ ಅಜ್ಜರ್ ಕಾಡು ಹುತಾತ್ಮ ಸ್ಮಾರಕದಲ್ಲಿ ವೀರ ಸೈನಿಕರಿಗೆ ಗೌರವ ಹಾಗೂ ನುಡಿ ನಮನ ಸಲ್ಲಿಸಲಾಯಿತು.
ಇಂದು ಸೈನಿಕರು ದೇಶದ ಗಡಿಯಲ್ಲಿ ಇದ್ದು ರಕ್ಷಣೆ ಮಾಡುವುದರಿಂದ ಇವತ್ತು ನಾವು ನೆಮ್ಮದಿಯಿಂದ ಇದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷೆ ಅಡ್ವಕೇಟ್ ಪ್ರೀತಿ ಕುಂದಾಪುರ ಹೇಳಿದರು ۔ ದೇಶದ ಗಡಿಯಲ್ಲಿ ರಕ್ಷಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿವೃತ್ತ ಸೈನಿಕ ಮುರಳಿಧರ ಮಾಹಿತಿಯನ್ನು ತಿಳಿಸಿದರು. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾಗಿರುವಾಗ ನಮ್ಮ ದೇಶದಲ್ಲಿ ಅಣ್ಣಸ್ತ್ರ ಪರಮಾಣು ಪರೀಕ್ಷೆಯನ್ನು ನಡೆಸಿದರು. ಆ ಕಡೆ ಪಾಕಿಸ್ತಾನದಲ್ಲೂ ಪ್ರಧಾನಿ ನವಾಜ್ ಶರೀಫ್ ಪರಮಾಣು ಪರೀಕ್ಷೆಯನ್ನು ನಡೆಸಿದರು. ಸೆಪ್ಟಂಬರ್ 15 1998ರಲ್ಲಿ ಅಮೆರಿಕದ ನ್ಯೂಯಾರ್ಕ್ ನಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಎರಡು ದೇಶದ ಸ್ನೇಹ ಸಂಬಂಧ ಸುಧಾರಿಸುವ ಗಟ್ಟಿಯಾಗಬೇಕೆಂಬ ಉದ್ದೇಶದಿಂದ ಫೆಬ್ರವರಿ 1999ರಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲಾಹೋರ್ ಗೆ ಬಸ್ ಯಾನ ಪ್ರಾರಂಭ ಮಾಡಿದರು۔ ಹೊಸ ಆರಂಭಕ್ಕೆ ಮುನ್ನುಡಿ ಎದ್ದು ಕಾಣುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಭಯಾನಕವಾಗಿ ಬದಲಾವಣೆಯಾಗುತ್ತದೆ ಎಂಬ ಲೆಕ್ಕಾಚಾರ ಇಬ್ಬರ ನಾಯಕರಿಗೂ ಇರಲಿಲ್ಲ, ಪಾಕಿಸ್ತಾನದ 200 ಸೈನಿಕರು ಭಾರತದ ಗಡಿರೇಖೆ ದಾಟಿ ಕಾರ್ಗಿಲ್ ಪರ್ವತ ಏರಿ ಕುಳಿತುಕೊಂಡರು. ಅಲ್ಲಿ 10 ಭಾರತೀಯ ಪೋಸ್ಟರ್ಗಳನ್ನು ಸುಲಭವಾಗಿ ವಶಪಡಿಸಿಕೊಂಡರು۔ ನಮ್ಮ ಸೈನಿಕರು ಯಾರು ಇರಲಿಲ್ಲ. ಚಳಿ ಇದ್ದ ಕಾರಣ ಕೆಳಗೆ ಬರುತ್ತಿದ್ದರು ನಂತರ ಬೇಸಿಗೆಯಲ್ಲಿ ಮತ್ತೆ ಹೋಗಿ ಕಾಯುತ್ತಿದ್ದರು. ಒಳನಸುಳಿ ನಮ್ಮ ಏಳು ಬೆಟಲಿಯನ್ ಅಲ್ಲಿ ಕುಳಿತುಕೊಂಡರು ಭಾರತಕ್ಕೆ ಯಾವುದೇ ಮಾಹಿತಿ ನೀಡಲ್ಲ ಮತ್ತೆ 132 ಪೋಸ್ಟರ್ಗಳನ್ನು ವಶ ಮಾಡಿಸಿಕೊಂಡರು. ನವಾಜ್ ಶರೀಫ್ ಗೊ ಮಾಹಿತಿ ಇರಲಿಲ್ಲ ۔ ಆಗ ಪಾಕ್ ನ ಸೇನಾ ಮುಖ್ಯಸ್ಥ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಇನ್ನು ನಾಲ್ಕು ಮಂದಿ ಸೇರಿ ಕಾರ್ಗಿಲ್ ಅನ್ನು ವಶಪಡಿಸಿಕೊಳ್ಳಲು ಲಾಹೋರ್ ಲಡಾಕ್ ಹೆದ್ದಾರಿಯನ್ನು ಬಂದ್ ಮಾಡಲು ಪ್ರಯತ್ನ ಮಾಡಿದ್ರು. ಮೇ 3ನೇ ತಾರೀಕು ಕುರಿಗಾಯಿಗಳು ಕಾರ್ಗಿಲ್ ಶಿಖರದ ಏರಿ ಬಂಕರ್ ಕದಿಯುತ್ತಿದ್ದಾರೆ ಎಂದು ಮಾಹಿತಿ ಬರುತ್ತದೆ۔ ನಿಮ್ಮದೇ ಕಾಶ್ಮೀರಿ ಉಗ್ರವಾದಿಗಳು ಎಂದು ಪಾಕ್ ಹೇಳುತ್ತದೆ ಮೇ ಅಂತ್ಯದ ವೇಳೆ ಕುಕ್ಸರ್ ಜುಬ್ಬರ್ ಟೈಗರ್ ಹಿಲ್ ಬ್ರಸಿಲ್ ಗೆ ನುಗ್ಗಿ ವಶಪಡಿಸಿಕೊಳ್ಳುತ್ತಾರೆ۔ ನಂತರ ಭಾರತದ ಸೈನಿಕರಿಗೆ ಗೊತ್ತಾಯ್ತು ۔ಇವರು ಮಾಮೂಲಿ ಅಲ್ಲ ಪಾಕ್ ಸೈನಿಕರು ಎಂದು ಗೊತ್ತಾಯಿತು۔ ಕೂಡಲೇ ಮೇ 24ರಂದು ಪ್ರಧಾನಿ ವಾಜಪೇಯಿ ದೆಹಲಿಯಲ್ಲಿ CCS ಸಭೆ ನಡೆಸಿ ಸೇನಾ ಮುಖ್ಯಸ್ಥ ವಿ ಪಿ ಮಲಿಕ್ ವಾಯುಪಡೆ ಮತ್ತು ನೌಕ ಪಡೆ ಬಳಸಬೇಕು ಎಂದು ಸರಕಾರಕ್ಕೆ ಅಗ್ರ ಮಾಡಿತು ಯಾವುದೇ ಕಾರಣಕ್ಕೂ ಅಂತರಾಷ್ಟ್ರೀಯ ಬಾರ್ಡರ್ ಬಿಟ್ಟು ಹೊರಗೆ ಹೋಗದೆ ನಮ್ಮ ಬಾರ್ಡರ್ ಅಲ್ಲಿ ನಿಂತು ಫೈರ್ ಮಾಡಿ ಎಂದು ತಿಳಿಸಿದರು. 13 ಸಾವಿರದಿಂದ 18 ಸಾವಿರದ ಎತ್ತರದಲ್ಲಿ ಅಡಗಿದ್ದ ಶತ್ರುಗಳನ್ನು ಹುಡುಕಿ ಹುಡುಕಿ ಕೊಲ್ಲಲಾಯಿತು۔ ಲೇಸರ್ ಗೈಡ್ ಲೆಸ್ ಸ್ಪೋಟಕ ಸುರಿಯುತಾ ಹೋಯ್ತು ಹುಡುಕಿ ಹುಡುಕಿ ವಶಪಡಿಸಿಕೊಂಡು ದಾಖಲೆ ಹಾಗೂ ಪಾಕ್ ಸೈನಿಕರ ಐಡಿ ಕಾರ್ಡ್ ಜಗತ್ತಿಗೆ ತೋರಿಸಿತು, ಇದು ಉಗ್ರವಾದಿಗಳಲ್ಲ ಪಾಕ್ ಸೈನಿಕರು ಎಂದು ಹೀಗೆ ಸಂಪೂರ್ಣ ಪಾಕನ ಕುತಂತ್ರ ಗೊತ್ತಾಯ್ತು۔ ಜುಲೈ 25ರಂದು ಟೈಗರ್ ಇಲ್ ಅನ್ನು ಪಾಯಿಂಟ್ 5140 ವಶಪಡಿಸಿಕೊಂಡದು ವಶಪಡಿಸಿಕೊಳ್ಳಲು ನೇತೃತ್ವ ವಹಿಸಿದ ಕ್ಯಾಪ್ಟನ್ ವಿಕ್ರಂ ಬಾತ್ರ ಸಂಗಡಿಗರು ಯುದ್ಧ ಮಾಡಿ ಜಯಿಸಿಕೊಟ್ಟು ವೀರ ಮರಣವನ್ನು ಅಪ್ಪಿದರು۔ ಅವರಿಗೆ ಪರಮ ವೀರ ಚಕ್ರ ಬಿರುದು ನೀಡಿ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯಿತು۔ ಈ ಯುದ್ಧದಲ್ಲಿ 500 ಕ್ಕಿಂತಲೂ ಹೆಚ್ಚು ಸೈನಿಕರು ಹುತಾತ್ಮರಾದರು. ಆದ್ದರಿಂದ ಜುಲೈ 26ರಂದು ಪ್ರತಿ ವರ್ಷ ಕಾರ್ಗಿಲ್ ವಿಜಯ ದಿನವನ್ನು ಆಚರಿಸಿದೆವು ಎಂದು ಸಂಪೂರ್ಣ ಮಾಹಿತಿಯನ್ನು ಸಂಸ್ಥೆಯ ನಿರ್ದೇಶಕರಾಗಿರುವ ಉದಯ ನಾಯ್ಕ್ ಎಲ್ಲರಿಗೂ ನೆನಪು ಮಾಡಿಕೊಟ್ಟರು.
ಸೈನಿಕರಿಗೆ ಗೌರವ ಹಾಗೂ ನಮನವನ್ನು ಸಲ್ಲಿಸಲಾಯಿತು.
ಕಾರ್ಯದರ್ಶಿ ಚಂದ್ರ ಮೀನ್, ನಿರ್ದೇಶಕ ಯೂಸುಫ್, ಸುನಿತಾ ಹಾಗೂ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು
ವರದಿ: ಉದಯ ನಾಯ್ಕ್ , ಉಡುಪಿ