ಅಂಚೆ ಇಲಾಖೆಯಿಂದ ಬೃಹತ್​ ನೇಮಕಾತಿ. ರಾಜ್ಯದಲ್ಲಿ 1714 ಡಾಕ್​ ಸೇವಕ್​ ಹುದ್ದೆಗೆ ಅರ್ಜಿ ಆಹ್ವಾನ

ಶೇರ್ ಮಾಡಿ

ಕರ್ನಾಟಕ ಅಂಚೆ ವೃತ್ತದಲ್ಲಿ ಡಾಕ್​ ಸೇವಕ್​ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆ ಸಿಹಿ ಸುದ್ದಿ ನೀಡಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1714 ಗ್ರಾಮೀಣ ಡಾಕ್​ ಸೇವಕ್​ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಹುದ್ದೆಗಳ ನೇಮಕಾತಿ ನಡೆಯಲಿದೆ. 10 ನೇ ತರಗತಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಈ ಕುರಿತು ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಹುದ್ದೆ ವಿವರ:
ಕರ್ನಾಟಕ ಅಂಚೆ​ ವೃತ್ತದಿಂದ ಒಟ್ಟು 1214 ಗ್ರಾಮೀಣ ಡಾಕ್​ ಸೇವಕ್​ (ಪಿಬಿಎಂ/ ಎಬಿಪಿಎಂ) ಹುದ್ದೆಗೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಯಾವ ಜಿಲ್ಲೆಗೆ ಎಷ್ಟು ಹುದ್ದೆ ಇಲ್ಲಿದೆ ವಿವರ:
ಬಾಗಲಕೋಟೆ- 29,ಬಳ್ಳಾರಿ- 43, ಬೆಳಗಾವಿ- 42, ಬೆಂಗಳೂರು ಪೂರ್ವ- 11, ಬೆಂಗಳೂರು ದಕ್ಷಿಣ- 4, ಬೆಂಗಳೂರು ಪಶ್ಚಿಮ- 6,ಬೀದರ್​- 49, ಚನ್ನಪಟ್ಟಣ- 66ಚಿಕ್ಕಮಗಳೂರು- 63, ಚಿಕ್ಕೋಡಿ- 45, ಚಿತ್ರದುರ್ಗ- 51,ದಾವಣಗೆರೆ- 47,ಧಾರವಾಡ- 36, ಗದಗ- 63,ಗೋಕಾಕ್​- 13, ಹಾಸನ್​- 84, ಹಾವೇರಿ- 33, ಕಲ್ಬುರ್ಗಿ-44, ಕಾರವಾರ- 53, ಕೊಡಗು- 44, ಕೋಲಾರ- 75, ಮಂಡ್ಯಾ-78, ಮಂಗಳೂರು- 52, ಮೈಸೂರು- 43, ನಂಜನಗೂಡು-41, ಪುತ್ತೂರು- 8, 9ರಾಯಚೂರು- 49, ಆರ್​ಎಂಎಸ್​ ಎಚ್​ಬಿ- 44, ಆರ್​ಎಂಎಸ್​ ಕ್ಯೂ 6, ಶಿವಮೊಗ್ಗ-74, ಉಡುಪಿ- 110, ವಿಜಯಪುರ- 65, ಯಾದಗಿರಿ- 33

ವಿದ್ಯಾರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 40 ವರ್ಷಗಳಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ವೇತನ:
ಗ್ರಾಮೀಣ ಡಾಕ್​ ಸೇವಕ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಹುದ್ದೆಗೆ 12,000-29,380ರೂವರೆಗೆ ಗ್ರಾಮೀಣ ಡಾಕ್​ ಸೇವಕ್​ ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಹುದ್ದಗೆ 10000-24470ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.ಈ ಹುದ್ದೆಗೆ ಅಭ್ಯರ್ಥಿಗಳು ಆಗಸ್ಟ್​ 3ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 23 ಆಗಿದೆ. ಅರ್ಜಿ ತಪ್ಪು ಸರಿಪಡಿಸುವಿಕೆಗೆ ಆಗಸ್ಟ್​ 24ರಿಂದ ಆಗಸ್ಟ್​ 26ರ ವರೆಗೆ ಕಾಲ ಅವಕಾಶ ನೀಡಲಾಗಿದೆ.
ಈ ಹುದ್ದೆ ಕುರಿತು ಸಂಪೂರ್ಣ ವಿವರಣೆ, ಅರ್ಜಿ ಸಲ್ಲಿಕೆ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣವಾದ indiapost.gov.in ಗೆ ಭೇಟಿ ನೀಡಬಹುದಾಗಿದೆ.

Leave a Reply

error: Content is protected !!