ಜನಸಂಖ್ಯೆಯಲ್ಲೀಗ ಭಾರತ ನಂ.1 ರಾಷ್ಟ್ರ. ಈಗ್ಲೂ ದೇಶದ ಹಲವೆಡೆ ಅವಿಭಕ್ತ ಕುಟುಂಬಗಳು ನೆಲೆ ನಿಂತಿರೋದು ವಿಶೇಷ. ಇಂತಹ ಕುಟುಂಬಗಳಲ್ಲಿ ಕನಿಷ್ಠ ಅಂದ್ರೂ 15 ರಿಂದ 30 ಸದಸ್ಯರನ್ನ ನಾವು ಕಾಣ್ತೇವೆ. ಆದ್ರೆ ಇಲ್ಲೊಂದು ಒಂದು ದೇಶವಿದೆ, ಅಲ್ಲಿನ ಒಟ್ಟು ಜನಸಂಖ್ಯೆ, ವಿಸ್ತೀರ್ಣವನ್ನ ಕೇಳಿದ್ರೆ ಒಂದು ಅವಿಭಕ್ತ ಕುಟುಂಬದ ಜನಸಂಖ್ಯೆಗಿಂತಲೂ ಹೆಚ್ಚೇನು ಇಲ್ಲ ಅನ್ನೋದು ಅಚ್ಚರಿ. ಯಾವ್ದು ಆ ದೇಶ? ಎಲ್ಲಿದೆ ಆ ದೇಶ? ಅಲ್ಲಿನ ವಿಶೇಷತೆಯಾದ್ರೂ ಏನೂ? ನೋಡೋಣ ಬನ್ನಿ…..
ವಿಶ್ವದ ಅತಿಸಣ್ಣ ದೇಶ ಯಾವ್ದು ಅಂದ್ರೆ ವ್ಯಾಟಿಕನ್ ಸಿಟಿ ಅಂತಾರೆ. ಆದ್ರೆ ಅದಕ್ಕಿಂತಲೂ ಚಿಕ್ಕ ದೇಶವೊಂದಿದೆ. ಅದುವೇ ಸೀ ಲ್ಯಾಂಡ್ (ಪ್ರಿನ್ಸಿಪಾಲಿಟಿ ಆಫ್ ಸೀ ಲ್ಯಾಂಡ್ ಅಂತಲೂ ಕರೆಯುತ್ತೇವೆ). ತನ್ನದೇ ಕರೆನ್ಸಿ, ನ್ಯಾಷನಲ್ ಫ್ಲ್ಯಾಗ್, ಪಾಸ್‌ಪೋರ್ಟ್ ಒಳಗೊಂಡಿರೋ ಈ ದೇಶ ನಿರ್ಮಾಣ ಆಗಿರೋದು ಪಾಳುಬಿದ್ದಿರುವ ಎರಡು ಟವರ್‌ಗಳ ಮೇಲೆ. ಇಂಗ್ಲೆಂಡ್‌ನ ಸೊಫೋಕ್ಲೆಸ್ ಕರಾವಳಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರೋ ದೇಶದಲ್ಲಿ ವಾಸಿಸುತ್ತಿರೋದು ಕೇಲವ 27 ಜನ ಮಾತ್ರ. 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರೀಟಿಷರಿಂದ ಸ್ಥಾಪಿಸಲ್ಪಟ್ಟ ಈ ದೇಶ ಇಂದಿಗೂ ಅಸ್ತಿತ್ವದಲ್ಲಿದ್ದು, ಮೈಕ್ರೋ ನೇಷನ್ ಅಂತಾನೇ ಫೇಮಸ್ ಆಗಿದೆ. ಆದ್ರೆ ಇದಕ್ಕೆ ವಿಶ್ವಸಂಸ್ಥೆಯಿಂದ ಮಾನ್ಯತೆ ಸಿಕ್ಕಿಲ್ಲ.
ಮೈಕ್ರೋ ನೇಷನ್ ನಿರ್ಮಾಣವಾಗಿದ್ದು ಹೇಗೆ..?
2ನೇ ವಿಶ್ವ ಮಹಾಯುದ್ಧದ ವೇಳೆಗೆ ಹತ್ತಿರವಿರುವಾಗ ಅಂದ್ರೆ 1943ರ ಅವಧಿಯಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ನಿರ್ಮಾಣ ಈ ಸೀ ಲ್ಯಾಂಡ್ ಅನ್ನ ನಿರ್ಮಾಣ ಮಾಡಿತು. ಆಗ ಸೈನ್ಯ ಮತ್ತು ನೌಕಾಪಡೆಯ ಭದ್ರ ಕೋಟೆಯನ್ನಾಗಿ ಬಳಸಲು ಈ ಸೀ ಲ್ಯಾಂಡ್ ಅನ್ನ ಸಮುದ್ರದ ಮಧ್ಯೆ ಸ್ಥಾಪಿಸಲಾಯಿತು. ಈ ಪಾಳುಬಿದ್ದ ಗೋಪುರಗಳ ಮೇಲಿರುವ ಭೂಮಿಯನ್ನ ರಫ್ ಟವರ್ ಅಂತಾ ಕರೀತಾರೆ. ಮಹಯುದ್ಧದ ಸಂದರ್ಭದಲ್ಲಿ ಬ್ರಿಟನ್ ಹಿಡಿತ ಸಾಧಿಸುವಲ್ಲಿ ಈ ಸೀ ಲ್ಯಾಂಡ್ ಮಾರ್ಗ ಯಶಸ್ವಿ ಪ್ರಯೋಗವಾಯ್ತು. ವಿಶ್ವ ಮಹಾಯುದ್ಧ ಮುಗಿದ ಬಳಿಕ ಈ ಕೋಟೆಯನ್ನ ಕೆಡೆವಲು ನಿರ್ಧರಿಸಲಾಯಿತು. ನಂತರ ಇದು ಸ್ವತಂತ್ರವಗಿ ದೇಶವೆಂದು ಘೋಷಿಸಿಕೊಂಡಿತು.
ರಫ್ ಟವರ್ ಅನ್ನ 1965 ರಲ್ಲಿ ಜ್ಯಾಕ್ ಮೂರ್ ಮತ್ತು ಮಗಳು ಜೇನ್ ವಶಪಡಿಸಿಕೊಂಡಿದ್ದರು. 1967 ರಲ್ಲಿ ಈ ಸ್ಥಳವನ್ನ ಬ್ರಿಟಿಷ್ ಮೇಜರ್ ಪ್ಯಾಡಿ ರಾಯ್ ಬೇಟ್ಸ್ ತಮ್ಮ ತೆಕ್ಕೆಗೆ ತೆಗೆದುಕೊಂಡ್ರು. ಪ್ಯಾಡಿ ರಾಯ್ ಬೇಟ್ಸ್ ದರೋಡೆಕೋರರ ಗುಂಪಿನೊಂದಿಗೆ ಗುರುತಿಸಿಕೊಂಡಿದ್ರು. ಈ ಟವರ್ ಅನ್ನು ವಶಪಡಿಸಿಕೊಂಡು ಕಡಲುಗಳ್ಳರಿಗಾಗಿ ರೇಡಿಯೊ ಕೇಂದ್ರವೊಂದನ್ನ ತೆರೆದಿದ್ರು. ರೇಡಿಯೋ ಎಸ್ಸೆಕ್ಸ್ ಎಂಬ ಹೆಸರಿನಲ್ಲಿ ಇದನ್ನು ಆರಂಭಿಸಿದ್ರೂ, ಅಲ್ಲಿ ಯಾವ್ದೇ ಕಾರ್ಯಕ್ರಮ ಪ್ರಸಾರ ಪ್ರಾರಂಭಿಸಲಾಗಿರಲಿಲ್ಲ. ಸೀ ಲ್ಯಾಂಡ್ ಇಂಟರ್ ನ್ಯಾಷನಲ್ ಗಡಿ ನೀರಿನಲ್ಲಿ ನಿರ್ಮಾಣಗೊಂಡಿದ್ದರಿಂದ ಬಿಬಿಸಿಯೊಂದೇ ಅಧಿಕೃತವಾಗಿತ್ತು.
ಕೆಲ ವರ್ಷಗಳ ನಂತರ ಬೇಟ್ಸ್ ರಫ್ ಟವರ್ ಅನ್ನು ಸ್ವತಂತ್ರ ಪ್ರದೇಶವೆಂದು ಘೋಷಿಸಿಕೊಂಡ ಬಳಿಕ ಸೀ ಲ್ಯಾಂಡ್ ದೇಶ ಎಂದು ಪರಿಗಣಿಸಲಾಯಿತು. 2ನೇ ಮಹಾಯುದ್ಧದ ವೇಳೆ ಬ್ರಿಟಿಷ್ ಸೈನ್ಯದಲ್ಲಿ ಪ್ಯಾಡಿ ರಾಯ್ ಬೇಟ್ಸ್ 1975 ರಲ್ಲಿ ಸೀ ಲ್ಯಾಂಡ್‌ಗಾಗಿ ಸಂವಿಧಾನ ಹಾಗೂ ರಾಷ್ಟ್ರ ಗೀತೆಯೊಂದನ್ನ ಪರಿಚಯಿಸಿದ್ರು. ಅಷ್ಟೇ ಅಲ್ಲ ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ಕರೆನ್ಸಿ ಹಾಗೂ ಪಾಸ್‌ಪೋರ್ಟ್ ಸಹ ರೂಪಿಸಿದರು. ಇಂದಿಗೂ ಅದು ಅನ್ವಯವಾಗಿದೆ. ಬೇಟ್ಸ್ 2012ರ ಅಕ್ಟೋಬರ್ 9 ರಂದು ತಾನು ಸೀ ಲ್ಯಾಂಡಿನ ರಾಜ ಅಂತ ಘೋಷಿಸಿಕೊಂಡರು. ರಾಯ್ ಬೇಟ್ಸ್ ಮರಣದ ನಂತರ ಅವರ ಮಗ ಮೈಕೆಲ್ ಬೇಟ್ಸ್ ತಮ್ಮ ತಂದೆಯ ಸ್ಥಾನವನ್ನ ಅಲಂಕರಿಸಿಕೊಂಡರು. ಸದ್ಯ ಪ್ರಿನ್ಸ್ ಲಿಯಾಮ್ ಹಾಗೂ ಪ್ರಿನ್ಸ್ ಜೇಮ್ಸ್ ಅವಳಿ ಬ್ರದರ್ಸ್ ಇದನ್ನ ನೋಡಿಕೊಳ್ತಿದ್ದಾರೆ.
ಅಕ್ರಮ ಪ್ರವೇಶ ಮಾಡಿದ್ರೆ 3 ತಿಂಗಳು ಜೈಲು ಗ್ಯಾರಂಟಿ!
ಇಂಗ್ಲೆಂಡ್‌ನ ಉತ್ತರ ಸಮುದ್ರದಲ್ಲಿ ಕೇವಲ 550 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಮೈಕ್ರೋ ನೇಷನ್‌ನಲ್ಲಿ ಸಾಕಷ್ಟು ವಿಶೇಷತೆಗಳನ್ನ ಕಾಣ್ಬೋದು. 27 ಜನಸಂಖ್ಯೆಯನ್ನ ಹೊಂದಿರೋ ಈ ದೇಶ ಭದ್ರತೆಗೋಸ್ಕರ ತನ್ನದೇ ಪುಟ್ಟ ಸೇನೆಯನ್ನ ಒಳಗೊಂಡಿದೆ. ನೀರಿನ ಮಧ್ಯೆಯಿದ್ದರೂ ಸಮುದ್ರದ ಅಲೆಗಳ ಹೊಡೆತವನ್ನ ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದೆ. ಈ ದೇಶಕ್ಕೆ ಹೋಗ್ಬೇಕು ಅಂದ್ರೆ ಸ್ಪೆಷಲ್ ಪರ್ಮಿಷನ್ ಬೇಕಂತೆ. ಲಂಡನ್‌ನಿಂದ ಸುಮಾರು 2 ಗಂಟೆ ಪ್ರಯಾಣ ಬೆಳೆಸಿದ್ರೆ ಮೈಕ್ರೋ ನೇಷನ್‌ನ ಈಸಿಯಾಗಿ ಸೇರ್ಬೋದು.
ಇಲ್ಲಿನ ವಿಶೇಷತೆ ನೋಡೊದಾದ್ರೆ ಪಾಳುಬಿದ್ದಂತೆ ಕಾಣುವ ಈ ಎರಡು ಟವರ್‌ಗಳ ಒಳಗೆಯೇ 7 ಬೆಡ್‌ರೂಮ್ ಇವೆ. ಜೊತೆಗೆ ಅಡುಗೆ ಮನೆ, ಲಿವಿಂಗ್ ರೂಂ, ಮಿನಿ ಸ್ಟಡಿ ಹಾಲ್, ಜಿಮ್ ಕೊಠಡಿ, ಸ್ಫೋರ್ಟ್ಸ್ ರೂಮ್, ಜೈಲನ್ನೂ ಒಳಗೊಂಡಿದೆ. ಸೋಲಾರ್ ಶಕ್ತಿಯಿಂದಲೇ ಇಲ್ಲಿಗೆ ವಿದ್ಯುತ್ ಸೌಲಭ್ಯ ಸಿಗುತ್ತೆ. 24*7 ಭದ್ರತಾ ಸಿಬ್ಬಂದಿಯೂ ಇರ್ತಾರೆ. ಇಲ್ಲಿಗೆ ಬರುವವರಿಗೆ ಪಾಸ್‌ಪೋರ್ಟ್ ಕಡ್ಡಾಯಗೊಳಿಸಿರುವ ದೇಶ ಕೋವಿಡ್ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನೂ ಕಡ್ಡಾಯಗೊಳಿಸಿದೆ. ಅನುಮತಿ ಇಲ್ಲದೇ ಎಂಟ್ರಿ ಕೊಟ್ರೆ 3 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗೋದಂತೂ ಗ್ಯಾರಂಟಿ.
ಸೀ ಲ್ಯಾಂಡ್‌ನ ಜನಸಂಖ್ಯೆ ಹೆಚ್ಚಿಸೋದಕ್ಕಾಗಿ ಅವಳಿ ಬ್ರದರ್ಸ್ ಸದ್ಯದಲ್ಲೇ ಆನ್‌ಲೈನ್‌ನಲ್ಲಿ ಪೌರತ್ವ ನೀಡುವ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದಾರೆ. ಜೊತೆಗೆ ಡಿಜಿಟಲ್ ಕರೆನ್ಸಿಯನ್ನೂ ಜಾರಿಗೆ ತರುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದ್ರೆ ಇಂದಿಗೂ ಇದನ್ನ ಯುಕೆ ಸರ್ಕಾರವಾಗ್ಲಿ, ವಿಶ್ವ ಸಂಸ್ಥೆಯಾಗ್ಲಿ ಅಧಿಕೃತ ದೇಶವೆಂದು ಪರಿಗಣಿಸಿಲ್ಲ, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳೋದಿಲ್ಲ ಅಂತಾ ಅವಳಿ ಬ್ರದರ್ಸ್ ಹೇಳಿದ್ದಾರೆ.
ಕಳೆದ 54 ವರ್ಷಗಳಿಂದ, ಇದು ಯುನೈಟೆಡ್ ಕಿಂಗ್‌ಡಮ್ ಸರ್ಕಾರದ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಸೀ ಲ್ಯಾಂಡ್ ಅಂತಾರಾಷ್ಟ್ರೀಯವಾಗಿ ದೇಶವೆಂದು ಗುರುತಿಸಲ್ಪಟ್ಟಿಲ್ಲ. ಆದ್ರೆ ಪ್ರಪಂಚದ ಉಳಿದ ದೇಶಗಳಂತೆ ಸ್ವಂತ ಕರೆನ್ಸಿ ಮತ್ತು ಅಂಚೆ ಚೀಟಿಗಳನ್ನ ಹೊಂದಿರುವುದು ವಿಶೇಷ.