ಪ್ರಿಯಕರನ ಮೇಲೆ ಮುನಿಸಿಕೊಂಡ ಯುವತಿಯೊಬ್ಬಳು 80 ಅಡಿ ಎತ್ತರದ ಹೈ ಟೆನ್ಶನ್ ವಿದ್ಯುತ್ ಟವರನ್ನು ಏರಿ ರಂಪಾಟ ನಡೆಸಿರುವ ಘಟನೆ ಚತ್ತೀಸ್ ಗಢದ ಗೌರೆಲಾ ಪೇಂದ್ರ ಮರ್ವಾಹಿ ಜಿಲ್ಲೆಯಲ್ಲಿ ನಡೆದಿದೆ.
ಪ್ರಿಯಕರನ ಸಮಾಧಾನದ ಮಾತುಗಳನ್ನು ಕೇಳಿಸಿಕೊಳ್ಳದ ಪ್ರಿಯತಮೆ ಕೋಪದಿಂದ 80 ಅಡಿ ಎತ್ತರದ ವಿದ್ಯುತ್ ಟವರ್ ಅನ್ನು ಏರಿದ್ದು, ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಬಾಯ್ ಫ್ರೆಂಡ್ ಕೂಡಾ ಟವರ್ ಅನ್ನು ಏರತೊಡಗಿದ್ದು, ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
*Upset with lover, Girlfriend Climbs high Tension tower, then lover also climbs*
— keshaboina sridhar (@keshaboinasri) August 6, 2023
This is the first time I have seen someone climb them to commit suicide upset with her lover. Good news, the boyfriend followed her up and convinced her to climb down. All iz well Chhattisgarh today pic.twitter.com/oPqiK0EMpl
ಇಬ್ಬರೂ ವಿದ್ಯುತ್ ಟವರ್ ಏರಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೇಂದ್ರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಘಟನೆ ಬಗ್ಗೆ ಯುವಕ ಮತ್ತು ಯುವತಿಯ ಕುಟುಂಬಸ್ಥರಿಗೆ ಕೂಡಾ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ವಿದ್ಯುತ್ ಟವರ್ ಏರಿರುವುದನ್ನು ಗಮನಿಸಿದ ನಂತರ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ನೆರೆದಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ದೀರ್ಘಕಾಲದ ಮಾತುಕತೆಯ ನಂತರ ಕೊನೆಗೂ ಇಬ್ಬರನ್ನೂ ಟವರ್ ನಿಂದ ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.