ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಗಳು ಕಡಬ: 77ನೇ ಸ್ವಾತಂತ್ರ್ಯ ದಿನಾಚರಣೆ

ಶೇರ್ ಮಾಡಿ

ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿದ್ಯುಕ್ತವಾಗಿ ಆಚರಿಸಲಾಯಿತು.
ನಿವೃತ್ತ RBI ಬ್ರಾಂಚ್ ಜನರಲ್ ಮೆನೇಜರ್ ವಿಲ್ಸನ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಧ್ವಜಾರೋಹಣ ನೆರವೇರಿಸಿದರು. “ಈ ದೇಶದ ಪ್ರತಿಯೊಬ್ಬ ನಾಗರಿಕರೂ ಕೂಡ ದೇಶದ ಪ್ರಗತಿಯ ಕನಸಿನೊಂದಿಗೆ ಐಕ್ಯತಾ ಭಾವನೆಯನ್ನು ಬೆಳೆಸಿಕೊಳ್ಳಬೇಕು; ದೇಶದ ಸಾರ್ವಭೌಮತೆಯ ವಿಚಾರ ಬಂದಾಗ ಸೋಲಿನ ಭಯವಿಲ್ಲದೆ ಬದ್ಧತೆಯಿಂದ ಕಾರ್ಯನಿರ್ವಹಿಸಿ ಅಮರರಾದ ಸ್ವಾತಂತ್ರ್ಯವೀರರು ಹಾಗೂ ಮಹಾನ್ ನಾಯಕರುಗಳೆಲ್ಲಾ ನಮಗೆ ಆದರ್ಶವಾಗಬೇಕು” ಎಂಬ ಸಂದೇಶ ನೀಡಿ, ಅವರು ಸ್ವಾತಂತ್ರ್ಯ ದಿನದ ಶುಭಾಶಯ ಕೋರಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ.ಪಾವ್ಲ್ ಪ್ರಕಾಶ್ ಡಿಸೋಜ ಅವರು ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಕೂಡ ನಿಸ್ವಾರ್ಥ ಮನೋಭಾವನೆ ಹಾಗೂ ದೇಶಪ್ರೇಮದೊಂದಿಗೆ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು. ಸಭಾ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಡಬ ಇದರ ವಿಶ್ರಾಂತ ಪ್ರಾಂಶುಪಾಲರಾದ ಚೆರಿಯನ್, ಸೈಂಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನ್ನೀಸ್ ಫೆರ್ನಾಂಡಿಸ್, ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷರುಗಳಾದ ಸತೀಶ್ ನಾಯ್ಕ್, ಬಾಲಕೃಷ್ಣ.ಬಿ, ಹರಿಪ್ರಸಾದ್ ಗೌಡ, ವಿದ್ಯಾ ಸಂಸ್ಥೆಗಳ ಮುಖ್ಯಸ್ಥರುಗಳಾದ ವಂ.ಅಮಿತ್ ಪ್ರಕಾಶ್ ರೋಡ್ರಿಗಸ್, ಕಿರಣ್ ಕುಮಾರ್, ಶ್ರೀಮತಿ ಶ್ರೀಲತಾ ಹಾಗೂ ಸಿಸ್ಟರ್ ಹಿಲ್ಡಾ ರೋಡ್ರಿಗಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಭಾಷಣ ಹಾಗೂ ದೇಶಭಕ್ತಿ ಗೀತೆ ನೆರವೇರುವುದರೊಂದಿಗೆ ಮುಖ್ಯ ಅತಿಥಿಗಳಿಂದ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಸೈಂಟ್ ಜೋಕಿಮ್ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ, ಸೈಂಟ್ ಆನ್ಸ್ ಶಾಲಾ ಶಿಕ್ಷಕಿ ಶ್ರೀಮತಿ ಸ್ವಾತಿ.ಬಿ ವಂದಿಸಿದರು. ಸೈಂಟ್ ಜೋಕಿಮ್ ಕಾಲೇಜು ಉಪನ್ಯಾಸಕ ರಾಜೇಶ್.ಎನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!