ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿ ಸದ್ಭಾವನಾ ದಿನದ ಮಹತ್ವ ತಿಳಿಸಿದರು. ಹಾಗೆಯೇ ಸದ್ಭಾವನಾ ಪ್ರತಿಜ್ಞೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ವಿವಿಧ ಧರ್ಮಗಳಲ್ಲಿ ಸಾಮರಸ್ಯದ ಬಗ್ಗೆ ವಿದ್ಯಾರ್ಥಿಗಳಿಂದ ಗೋಷ್ಠಿ ನಡೆಯಿತು. ಹಿಂದೂ ಧರ್ಮದ ಬಗ್ಗೆ ಆದಿತ್ಯ ಹೆಗಡೆ, ಇಸ್ಲಾಂ ಧರ್ಮದ ಬಗ್ಗೆ ಮುಹಮ್ಮದ್ ಸಲೀಲ್, ಜೈನ ಧರ್ಮದ ಬಗ್ಗೆ ಚಾರಿತ್ರ್ಯ ಜೈನ್ ಹಾಗೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರೀತಮ್ ಮಿನೇಜಸ್ ಇವರು ಸಾಮರಸ್ಯದ ಬಗ್ಗೆ ಮಾತನಾಡಿದರು.
ರಾ.ಸೇ.ಯೋಜನೆಯ ನಾಯಕಿ ದಕ್ಷಾ ಸ್ವಾಗತಿಸಿ, ಅಕ್ಷತಾ ಎಂ.ಜಿ ವಂದಿಸಿದರು. ಡಯಾನಾ ನಿರೂಪಿಸಿದರು.