ಚಪಾತಿ, ಪೂರಿ, ದೋಸೆಯೊಂದಿಗೆ ಸವಿಯಲು ಅಥವಾ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಲು ನಾವಿಂದು ಕೇವಲ 30 ನಿಮಿಷಗಳಲ್ಲಿ ಮಾಡಬಹುದಾದ ಒಂದು ಸಿಂಪಲ್ ರೆಸಿಪಿಯನ್ನು ಹೇಳಿಕೊಡುತ್ತೇವೆ. ಗೋಬಿಯಿಂದ ಸಿಂಪಲ್ ಆಗಿ ನೀವು ಈ ರೀತಿಯಾಗಿ ಕೂರ್ಮಾವನ್ನು ಮಾಡಿ ನೋಡಿ.
ಬೇಕಾಗುವ ಪರ್ದಾರ್ಥಗಳು:
ಹೂಕೋಸು/ಗೋಬಿ – 200 ಗ್ರಾಂ
ಬೀನ್ಸ್ – 100 ಗ್ರಾಂ
ಕ್ಯಾರೆಟ್ – 1
ಬಟಾಣಿ – ಅರ್ಧ ಕಪ್
ಜೀರಿಗೆ – ಅರ್ಧ ಟೀಸ್ಪೂನ್
ಈರುಳ್ಳಿ – 2
ಲವಂಗ – 2
ದಾಲ್ಚಿನ್ನಿ ಚಕ್ಕೆ – 1
ಏಲಕ್ಕಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಹಸಿರು ಮೆಣಸಿನಕಾಯಿ – 2
ಹಾಲು – 1 ಕಪ್
ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
ತುಪ್ಪ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಚಹಾದೊಂದಿಗೆ ಮಜವೆನಿಸುತ್ತದೆ ಬೆಂಡೆಕಾಯಿಯ ಕುರುಕಲು ತಿಂಡಿ
ಮಾಡುವ ವಿಧಾನ:
- ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ ಹಾಕಿ ಹುರಿದುಕೊಳ್ಳಿ.
- ಜೀರಿಗೆ ಸಿಡಿಯುವ ವೇಳೆ ಹೆಚ್ಚಿದ ಈರುಳ್ಳಿ, ಲವಂಗ, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಸೇರಿಸಿ ಸ್ವಲ್ಪ ಹುರಿಯಿರಿ.
- ಹೂಕೋಸು, ಬೀನ್ಸ್, ಕ್ಯಾರೆಟ್, ಬಟಾಣಿ, ಉಪ್ಪು, ಅರ್ಧ ಕಪ್ ಹಾಲು ಮತ್ತು ಕಾಲು ಕಪ್ ನೀರು ಸೇರಿಸಿ.
- ತರಕಾರಿಗಳು ಮೃದುವಾಗುವವರೆಗೆ ಮುಚ್ಚಿ, ಬೇಯಿಸಿ.
- ನಂತರ ಉಳಿದ ಹಾಲು ಮತ್ತು ಗರಂ ಮಸಾಲಾ ಸೇರಿಸಿ ಇನ್ನೂ 5 ನಿಮಿಷ ಬೇಯಿಸಿಕೊಳ್ಳಿ.
- ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಗೋಬಿ ಕೂರ್ಮಾವನ್ನು ಬಡಿಸಿ.