ಶಿಶಿಲ: ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಭರ್ಜರಿ ಬೇಟೆ, ಮರ ಸಮೇತ;ಓರ್ವನ ಬಂಧನ; ಮತ್ತೊರ್ವ ಪರಾರಿ

ಶೇರ್ ಮಾಡಿ

ಶಿಶಿಲ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮಿಯ್ಯಾರು ರಕ್ಷಿತಾರಣ್ಯದ ಹೇವಾಜೆಯಲ್ಲಿ ಸಪ್ಟೆಂಬರ್ 06 ರಂದು ರಕ್ಷಿತಾರಣ್ಯದೊಳಗೆ ಅಕ್ರಮವಾಗಿ ಬೇಂಗ ಮರ ಕಡಿದು ದಾಸ್ತಾನು ಮಾಡುತ್ತಿದ್ದಾಗ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿ, ಮತ್ತೊರ್ವ ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ.
ದಾಳಿ ವೇಳೆ ಶಿಶಿಲ ಗ್ರಾಮದ ದೇವಸ ನಿವಾಸಿ ಸೇಸಪ್ಪ ಗೌಡರ ಮಗ ಧರ್ಣಪ್ಪ ಗೌಡ(46) ಬಂಧಿಸಿದ್ದು. ಮತ್ತೊರ್ವ ಆರೋಪಿ ಹೇವಾಜೆ ನಿವಾಸಿ ಅಜಿತ್ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಒಂದು ಕಟ್ಟಿಂಗ್ ಮೀಷಿನ್, ಗರಗಸ, ಕಡಿದ ಒಂದು ಬೇಂಗ ಮರ ವಶಪಡಿಸಿಕೊಂಡಿದ್ದು ಒಟ್ಟು ಮೌಲ್ಯ 1 ಲಕ್ಷದ 39 ಸಾವಿರ ಅಗಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್.ಕೆ.ಕೆ ಮಾರ್ಗದರ್ಶನಲ್ಲಿ ಕಳೆಂಜ ಶಾಖಾ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್, ಉಪವಲಯ ಅರಣ್ಯಾಧಿಕಾರಿ ಭರತ್ , ಅರಣ್ಯಪಾಲಕ ಸನತ್, ವಿನಯಚಂದ್ರ , ರಾಜೇಶ್, ಲಿಂಗಪ್ಪ, ಸುನಿಲ್ ನಾಯ್ಕ್, ಚಾಲಕ ಕಿಶೋರ್ ಕಾರ್ಯಾಚರಣೆ ಭಾಗವಹಿಸಿದರು.

Leave a Reply

error: Content is protected !!