ನೇಸರ ಜ.24: ಮಂಗಳೂರು ನಂತೂರು ಪಾದುವಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರೆಮೋನಾ ಇವೆಟ್ಟ ಪಿರೇರಾಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಲಭಿಸಿದೆ.ಪುರಸ್ಕಾರವು ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ದೇಶದ 29 ಮಕ್ಕಳ ಜತೆ ರೆಮೋನಾ ಇವೆಟ್ಟ ಪಿರೇರಾಗೆ ಆನ್ಲೈನ್ ಮೂಲಕ ಸಂವಾದ ನಡೆಸಿ,ಪ್ರಶಸ್ತಿ ಪ್ರದಾನ ಮಾಡಿದರು.ಪ್ರಧಾನಿ ಜತೆ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ ಭಾಗವಹಿಸಿದ್ದರು. ಮಂಗಳೂರಿನಿಂದ ರೆಮೋನಾ ಜತೆ ತಾಯಿ ಗ್ಲಾಡಿಸ್ ಪಿರೇರಾ,ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ ಭಾಗವಹಿಸಿದ್ದರು.
ಭರತನಾಟ್ಯ ಕಲಾವಿದೆಯಾಗಿರುವ ಈಕೆ,ಇಂಡಿಯಾ ಬುಕ್ ಆಫ್ ರೆಕಾರ್ಡ್,ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್,ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್- ಲಂಡನ್,ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಸಾಧಾರಣ ಪ್ರತಿಭಾ ಪುರಸ್ಕಾರ- 2017,ರಾಜ್ಯ ಸರಕಾರದಿಂದ ಬಾಲ ಗೌರವ ಪ್ರಶಸ್ತಿ- 2022 ಲಭಿಸಿದೆ.