ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಸೈಂಟ್ ಜಾರ್ಜ್ ಅರ್ಥೋಡಾಕ್ಸ್ ಸೀರಿಯನ್ ಚರ್ಚ್ ನಲ್ಲಿ ಸೆ.06ರಂದು ಅರಣ್ಯ ಇಲಾಖೆ ವತಿಯಿಂದ ನಾಗರಿಕರಿಗೆ ಕಾಡಾನೆಗಳು ತೋಟಕ್ಕೆ ಬರದಂತೆ ತಡೆಗಟ್ಟುವ ಹಾಗೂ ಬಂದರೆ ಕೈಗೊಳ್ಳಬೇಕಾದ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅಂತಾರಾಷ್ಟ್ರೀಯ ಮಟ್ಟದ ತಜ್ಞರಾದ ಡಾ.ರುದ್ರಾಧಿತ್ಯ ವಿಕ್ರಂ ಷಾ ರವರು ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ ಇಚಿಲಂಪಾಡಿ ಚರ್ಚಿನ ಧರ್ಮ ಗುರುಗಳು, ಗ್ರಾಮ ಪಂಚಾಯತ್ ಸದಸ್ಯರಾದ ಡೈಸಿ ವರ್ಗೀಸ್, ರೋಯಿ ಹಾಗೂ ಇಚಿಲಂಪಾಡಿ, ನೆಲ್ಯಾಡಿ ಮತ್ತು ನೂಜಿಬಾಳ್ತಿಲ ಗ್ರಾಮದ ನಾಗರಿಕರು ಪಾಲ್ಗೊಂಡು ಮಾಹಿತಿ ಪಡೆದರು.
ಗ್ರಾಮಸ್ಥರ ಪರವಾಗಿ ಚಾಕೋರವರು ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರಿಗೂ ವಂದಿಸಿದರು. ಉಪವಲಯ ಅರಣ್ಯಾಧಿಕಾರಿಗಳಾದ ಸುನೀಲ್ ಕುಮಾರ್, ಅಜಿತ್ ಕುಮಾರ್, ಅರಣ್ಯ ರಕ್ಷಕರಾದ ದೇವಿಪ್ರಸಾದ್, ಆಕಾಶ್, ಅರಣ್ಯವೀಕ್ಷಕ ಜನಾರ್ಧನ್ ಕಾರ್ಯಗಾರವನ್ನು ನಡೆಸಿಕೊಟ್ಟರು.