ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗೋವಧೆ ಮಾಡಿ ಮಾಂಸವನ್ನು ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದ ಮಾಹಿತಿ ಪಡೆದ ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಮತ್ತು ಸಿಬಂದಿ ಮಾಂಸ ಸಹಿತ ಆರೋಪಿಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಸಾಗಾಟದ ವೇಳೆ 1 ಗಂಡು ಕರು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಜೀಪನ್ನು ಸ್ವಾಧೀನಪಡಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದಲ್ಲಿ ಜೀಪಿನಲ್ಲಿ ಆರೋಪಿಗಳಾದ ತೋಡುಪುಡ ತಾಲೂಕು, ಇಡಿ ಜಿಲ್ಲೆ, ಕೇರಳ ನಿವಾಸಿ ಜಿನು ತೋಮಸ್ (34) ಮತ್ತು ಕುತ್ತೂರು ನಿವಾಸಿ ರಂಜಿತ್ (31) ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗೋ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳು, ಸಾಗಾಟಕ್ಕೆ ಉಪಯೋಗಿಸಿದ ಜೀಪು ಸಹಿತ ಕರುವನ್ನು ಸ್ವಾಧೀನಪಡಿಸಿ ಪ್ರಕರಣ ದಾಖಲಿಸಲಾಗಿದೆ.