ನೇಸರ ಜ.27: ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಪದವಿಪೂರ್ವ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ 26 ಡಿಸೆಂಬರ್ 2021 ರಿಂದ ಒಂದು ತಿಂಗಳ ಕಾಲ “ವಿಶ್ವಾಸ ಕಿರಣ” ಎಂಬ ಶೀರ್ಷಿಕೆಯಡಿಯಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯ ವಿಶೇಷ ತರಗತಿಗಳನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ವಿವಿಧ ಸಂಪನ್ಮೂಲ ಉಪನ್ಯಾಸಕರ ಸಹಾಯ, ಸಹಕಾರದಿಂದ ನಡೆಸಲಾಯಿತು. ಸಮಾರೋಪ ಸಮಾರಂಭವು ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ.ಕೆ.ಎನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಕಾಲೇಜಿನ ಆಂಗ್ಲಭಾಷೆಯ ಉಪನ್ಯಾಸಕಿ ಶ್ರೀಮತಿ ಭಾರತಿ,ಚೇತನೀ ಕುಮಾರಿ ಇವರ ಸೇವೆಯನ್ನು ಶ್ಲಾಘಿಸಿದರು.ಸಂಪನ್ಮೂಲ ವ್ಯಕ್ತಿಗಳಿಗೆ ಸಂಸ್ಥೆಯ ವತಿಯಿಂದ ಧನ್ಯವಾದ ಅರ್ಪಿಸಿದರು.ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡ 27 ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು ಮತ್ತು ತಾವು ಕಲಿತ ವಿಷಯಗಳು ಮರೆತು ಹೋಗದಿರಲು ಪುನರ್ಮನನ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಆಂಗ್ಲಭಾಷೆಯ ಅತಿಥಿ ಉಪನ್ಯಾಸಕಿ ಚೇತನೀ ಕುಮಾರಿ ಪ್ರಾಸ್ತಾವಿಕ ಭಾಷಣ ಮಾಡಿದರು.ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.ಹಿರಿಯ ಉಪನ್ಯಾಸಕರಾದ ವಾಸುದೇವ ಗೌಡ ಈಕಾರ್ಯಕ್ರಮವನ್ನು ಗ್ರಾಮೀಣ ಭಾಗದ ಕನ್ನಡ ಕಲಿತ ಎಲ್ಲಾ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೂ ಲಭಿಸಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟರು.ಉಪನ್ಯಾಸಕರಾದ ಸುಕೇಶ ಚಂದ್ರಶೇಖರ ಸ್ವಾಗತಿಸಿ,ಮಹದೇವ ಶೆಟ್ಟಿ ವಂದಿಸಿದರು,ಸಲೀನ್.ಕೆ.ಪಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು