Asian Games 2023: ಭಾರತಕ್ಕೆ ಮೂರು ಬೆಳ್ಳಿ, ಎರಡು ಕಂಚಿನ ಪದಕ

ಶೇರ್ ಮಾಡಿ

19ನೇ ಏಷ್ಯನ್‌ ಕ್ರೀಡಾಕೂಟ ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿದ್ದು, ಮೊದಲ ದಿನ ವಿವಿಧ ಕ್ರೀಡೆಗಳಲ್ಲಿ ಭಾರತಕ್ಕೆ 3 ಬೆಳ್ಳಿ ಹಾಗೂ 2 ಕಂಚಿನ ಪದಕಗಳು ಬಂದಿವೆ.

ಮಹಿಳೆಯರ ಶೂಟಿಂಗ್‌ ವಿಭಾಗದಲ್ಲಿ ಇಂದು (ಭಾನುವಾರ) ಭಾರತವು ಮೊದಲ ಪದಕದೊಂದಿಗೆ ಖಾತೆ ತೆರೆಯಿತು.

*10 ಮೀ ಏರ್‌ ರೈಫಲ್‌ ಶೂಟಿಂಗ್‌: 10 ಮೀ ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಭಾರತದ ಮಹಿಳಾ ತಂಡವು ಬೆಳ್ಳಿ ಪದಕ ಜಯಿಸಿದೆ. ಮೆಹುಲಿ ಘೋಷ್, ರಮಿತಾ ಮತ್ತು ಆಶಿ ಚೌಕ್ಸೆ ಪದಕಕ್ಕೆ ಮುತ್ತಿಟ್ಟರು. ಒಟ್ಟು 1,886 ಅಂಕ ಗಳಿಸುವ ಮೂಲಕ ಚೀನಾದ ನಂತರ 2ನೇ ಸ್ಥಾನ ಗಳಿಸಿದ್ದಾರೆ.

*ರೋಯಿಂಗ್: ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್‌ನಲ್ಲಿ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಜೋಡಿ 6:28.18 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು.

*ರೋಯಿಂಗ್‌, ಪುರುಷರ ಜೋಡಿ: ಲೇಖ್ ರಾಮ್ ಮತ್ತು ಬಾಬು ಲಾಲ್ ಯಾದವ್ ಜೋಡಿಯು 6:50.41 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಆ ಮೂಲಕ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟರು.

*ರೋಯಿಂಗ್‌: ರೋಯಿಂಗ್‌ನಲ್ಲಿ ಪದಕದ ಭರಾಟೆ ಮುಂದುವರಿಸಿದ ಭಾರತವು ಈ ಬಾರಿ ಪುರುಷರ ಎಂಟರ ಸ್ಪರ್ಧೆಯಲ್ಲಿ ಮತ್ತೊಂದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.

*ಶೂಟಿಂಗ್: ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್‌ ರಮಿತಾ ಜಿಂದಾಲ್‌ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. 19 ವಯಸ್ಸಿನ ರಮಿತಾ 230.1 ಅಂಕದೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ.

Leave a Reply

error: Content is protected !!