ಅಂದವನ್ನು ಹೆಚ್ಚಿಸುವ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣವನ್ನೇ ತೆತ್ತಿರುವ ದುರಂತ ಘಟನೆಗಳು ನಡೆದಿರುವುದನ್ನು ನೋಡಿದ್ದೇವೆ. ಮದುವೆ ಆಗಲಿದ್ದ ವಧುಯೊಬ್ಬರು ಇಂಥದ್ದೇ ಸರ್ಜರಿಯೊಂದನಗನು ಮಾಡಿಸಿಕೊಂಡ ಬಳಿಕ ದುರಂತ ಅಂತ್ಯವಾಗಿದ್ದಾರೆ.
ಇಟಲಿಯಲ್ಲಿ ಈ ಘಟನೆ ನಡೆದಿದ್ದು, ಅಲೆಸಿಯಾ ನೆಬೊಸೊ(21) ಯುವತಿ ತನ್ನ ಬಹು ಕಾಲದ ಪ್ರಿಯಕರನೊಂದಿಗೆ ಮದುವೆ ಆಗಲು ಸಿದ್ದರಾಗಿದ್ದರು. ಇನ್ನೇನು ಮದುವೆ ದಿನಾಂಕ ಕೂಡ ಸಮೀಪದಲ್ಲಿತ್ತು. ಅಲೆಸಿಯಾ ನೆಬೊಸೊ ಅವರಿಗೆ ತಾನು ಮದುವೆಗೆ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳಬೇಕೆಂದು ಆಸೆಯಿತ್ತು. ಅವರ ಸ್ತನ ಎದ್ದು ಕಾಣಬೇಕೆಂದು ಅವರು ಬಯಸಿದ್ದರು. ಈ ಕಾರಣದಿಂದ ಆಕೆ ಮದುವೆ ಮುನ್ನ ಸ್ತನದ ಗಾತ್ರವನ್ನು ದೊಡ್ಡದು ಮಾಡುವ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗುತ್ತಾರೆ.
ಪ್ಲಾಸ್ಟಿಕ್ ಸರ್ಜರಿ ಮಾಡುವ ಸ್ಪೆಷಲಿಸ್ಟ್ ಕ್ಲಿನಿಕ್ಗೆ ಹೋಗಿ ಸಾಮಾನ್ಯ ಪರೀಕ್ಷೆಗಳನ್ನು ಮಾಡಿಸಿದ್ದಾರೆ. ಸೆ. 11 ರಂದು ಅಲೆಸಿಯಾ ನೆಬೊಸೊ ಸರ್ಜರಿಯನ್ನು ಮಾಡಿಸಿಕೊಂಡು ಅದೇ ದಿನ ಡಿಸ್ಚಾರ್ಜ್ ಆಗಿ ಮನೆಗೆ ಹಿಂತಿರುಗಿದ್ದಾರೆ. ಆದರೆ ಎರಡು ದಿನ ಬಳಿಕ ಅಲೆಸಿಯಾ ನೆಬೊಸೊ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿದೆ. ಆಯಾಸ, ಕೆಮ್ಮು, ವೀಕ್ ನೆಸ್ ಕಾಣಿಸಿಕೊಂಡಿದೆ. ಮಗಳ ಆರೋಗ್ಯ ಹದಗೆಟ್ಟಿದ್ದರಿಂದ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಗೆ ತಲುಪಿದ ಬಳಿಕ ಅಲೆಸಿಯಾ ನೆಬೊಸೊ ಸೆ.18 ರವರೆಗೆ ಸರಿಯಾಗಿಯೇ ಇದ್ದಳು. ಆದರೆ ಸಂಜೆ ವೇಳೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಮರುದಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಕಿಡ್ನಿ ಸೇರಿ ಕೆಲ ಅಂಗಾಂಗಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅವಳ ಬಿಳಿ ರಕ್ತ ಕಣಗಳ ಸಂಖ್ಯೆ 17,000 ಆಗಿತ್ತು. ಉಸಿರಾಡಲು ಕಷ್ಟಪಡಲು ಪ್ರಾರಂಭಿಸಿದಳು. ನಾವು ಅಲ್ಟ್ರಾಸೌಂಡ್ ಮತ್ತು ಹೊಟ್ಟೆಯ ಸಿಟಿ ಸ್ಕ್ಯಾನ್ ಮಾಡಿದ್ದೇವೆ, ಎದೆಯ ಮತ್ತೊಂದು ಸಿಟಿ ಸ್ಕ್ಯಾನ್ ಮಾಡಿದ್ದೇವೆ. ಇದರಿಂದ ಸಮಸ್ಯೆ ಶ್ವಾಸಕೋಶದಿಂದ ಬರುತ್ತಿದೆ ಎಂದು ಗೊತ್ತಾಯಿತು. ಇದಾದ ಬಳಿಕ ನಾವು ಆಕೆಯನ್ನು ಐಸಿಯುಗೆ ದಾಖಲು ಮಾಡಿದ್ದೇವೆ. ಆದರೆ ಕೆಲ ಗಂಟೆಗಳ ಬಳಿ ಆಕೆ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟಳು” ಎಂದು ಡಾ.ಸಿಕರೆಲ್ಲಿ ಹೇಳಿದ್ದಾರೆ ಎಂದು ‘ದಿ ಸನ್’ ವರದಿ ತಿಳಿಸಿದೆ.
ಅಲೆಸ್ಸಿಯಾ ಯಾವಾಗಲೂ ತನ್ನ ಚಿಕ್ಕ ಸ್ತನಗಳ ದೂರು ಹೇಳುತ್ತಿದ್ದಳು. ಆದರೆ ಅವುಗಳು ನಿಜವಾಗಿಯೂ ಚಿಕ್ಕದಾಗಿರಲಿಲ್ಲ. ಅವಳು ನಮ್ಮ ಸಲಹೆಗಳನ್ನು ಕೇಳುತ್ತಿರಲಿಲ್ಲ. ಅವಳ ಪ್ರಿಯಕರನ ಮಾತನ್ನು ಸಹ ಅವಳ ಕೇಳುತ್ತಿರಲಿಲ್ಲ ಎಂದು ಆಕೆಯ ಸ್ನೇಹಿತರು ಹೇಳುತ್ತಾರೆ.
ಸದ್ಯ ಮೃತಳ ಪೋಷಕರು ಈ ಬಗ್ಗೆ ದೂರು ದಾಖಲಿಸಿದ್ದು, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಯಾವುದೇ ತಪ್ಪುಗಳಿಂದ ತಮ್ಮ ಮಗಳು ಸಾಯಲಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಒಂದು ವೇಳೆ ತಪ್ಪುಗಳಾಗಿದ್ದರೆ ಅದು ಬೆಳಕಿಗೆ ಬರಬೇಕು. ವೈದ್ಯರಿಂದಾಗಿ ಅಲೆಸಿಯಾ ಸಾವನ್ನಪ್ಪಿದ್ದರೆ, ನಮಗೆ ನ್ಯಾಯ ಬೇಕೆಂದು ಅವಳ ಪೋಷಕರು ಹೇಳುತ್ತಾರೆ.