ನೇಸರ ಜ.29: ನೆಲ್ಯಾಡಿ 39ನೇ ವರುಷದ ಇತಿಹಾಸವುಳ್ಳ ಜೇಸಿಐ,ಜೇಸಿರೇಟ್ ಹಾಗೂ ಜೂನಿಯರ್ ಜೇಸಿವಿಂಗ್ ನಿಂದ ನೂತನವಾಗಿ ಆಯ್ಕೆಯಾದ ಜೇಸಿ.ಜಯಂತಿ.ಬಿ.ಎಂ ಮತ್ತು ತಂಡದವರಿಂದ ಪದಸ್ವೀಕಾರ ಸಮಾರಂಭ ದಿನಾಂಕ 31-01- 2022 ನೇ ಸೋಮವಾರ ಸಂಜೆ ಗಂಟೆ 6.00ಕ್ಕೆ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ,ನೆಲ್ಯಾಡಿಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಮಲ್ಲಾರ,ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಕಡಬ,ಗೌರವ ಉಪಸ್ಥಿತಿ ಜೇಸಿ.ಸೆನೆಟರ್.ರೋಯನ್ ಉದಯ ಕ್ರಾಸ್ತ,ವಲಯಾಧ್ಯಕ್ಷರು ವಲಯ15,ಜೇಸಿ.ಸೆನೆಟರ್.ಸ್ವಾತಿ.ಜೆ.ರೈ,ವಲಯ ಉಪಾಧ್ಯಕ್ಷರು ವಲಯ 15 ಪ್ರಾಂತ್ಯ -A,2021ರ ಸಾಧನ ಶ್ರೀ ಪ್ರಶಸ್ತಿ ಪುರಸ್ಕೃತ ಜೇಸಿ.ಎಚ್.ಜಿ.ಎಫ್. ಚಂದ್ರಶೇಖರ್ ಬಾಣಜಾಲು ರವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಿಯೋಜಿತ ಎಲ್ಲಾ ಪದಾಧಿಕಾರಿಗಳು, ಪೂರ್ವ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.