4000 ಸಿವಿಲ್ ಕಾನ್ಸ್‌ಟೇಬಲ್‌ ನೇಮಕ: 11 ಜಿಲ್ಲೆಗೆ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಶೇರ್ ಮಾಡಿ

ನೇಸರ ಜ.30: KSP Civil Police Constable Provisional List: ರಾಜ್ಯ ಪೊಲೀಸ್ ಇಲಾಖೆಯು 2021 ನೇ ಸಾಲಿನಲ್ಲಿ ಅಧಿಸೂಚಿಸಿದ್ದ 4000 ಸಿವಿಲ್ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ,ವಿವಿಧ ಜಿಲ್ಲೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಕೆಎಸ್‌ಪಿ ವೆಬ್‌ಸೈಟ್‌ಗೆ ಭೇಟಿ ನೀಡಿ, ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಚೆಕ್‌ ಮಾಡಬಹುದು.
ಅಧಿಸೂಚನೆಯಲ್ಲಿ ಸೂಚಿಸಿದ್ದ ಜಿಲ್ಲೆವಾರು ಹುದ್ದೆಗಳ ಹಂಚಿಕೆಗೆ ಅನುಗುಣವಾಗಿ ಅಭ್ಯರ್ಥಿಗಳ ಹೆಸರನ್ನು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ನೀಡಲಾಗಿದೆ.

ಸಿವಿಲ್ ಪಿಸಿ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾದ ಜಿಲ್ಲೆಗಳು

ದಕ್ಷಿಣ ಕನ್ನಡ (ಮಂಗಳೂರು)
ಗದಗ್
ಕೋಲಾರ
ವಿಜಯಪುರ
ಮೈಸೂರು ಸಿಟಿ
ಉಡುಪಿ
ಹಾಸನ
ಬೆಂಗಳೂರು ಜಿಲ್ಲೆ
ಬೆಳಗಾವಿ ಜಿಲ್ಲೆ
ಚಿಕ್ಕಮಗಳೂರು
ರಾಮನಗರ ಜಿಲ್ಲೆ

ಪ್ರತಿ ಜಿಲ್ಲೆಯ ತಾತ್ಕಾಲಿಕ ಆಯ್ಕೆಪಟ್ಟಿ ಚೆಕ್‌ ಮಾಡಲು ವೆಬ್‌ಸೈಟ್‌ http://cpc21.ksp-online.in/ ನಲ್ಲಿ ಪ್ರತ್ಯೇಕ ಲಿಂಕ್‌ಗಳನ್ನು ನೀಡಲಾಗಿದೆ.

ಪ್ರಾವಿಷನಲ್ ಲಿಸ್ಟ್‌ನಲ್ಲಿ ಅಭ್ಯರ್ಥಿಗಳ ಅಪ್ಲಿಕೇಶನ್‌ ನಂಬರ್, ರೋಲ್‌ ನಂಬರ್, ಹೆಸರು, ಲಿಖಿತ ಪರೀಕ್ಷೆ ಅಂಕಗಳು, ಸೆಲೆಕ್ಟ್‌ ಆದ ಕೆಟಗರಿ ಮಾಹಿತಿ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಹಂಚಿಕೆಯಾದ ಸಿವಿಲ್‌ ಪಿಸಿ ಹುದ್ದೆಗೆ 1:5 ಅಭ್ಯರ್ಥಿಗಳ ಲಿಸ್ಟ್‌ ಅನ್ನು ಈ ಆಯ್ಕೆಪಟ್ಟಿಯಲ್ಲಿ ನೀಡಲಾಗಿದೆ. ಈ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಹುದ್ದೆ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಅಭ್ಯರ್ಥಿಗಳು ಇಲಾಖೆ ನಡೆಸುವ ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.
2021 ರ ಮೇ 21 ರಂದು ಅಧಿಸೂಚನೆ ಪ್ರಕಟಿಸಿ, ಮೇ 25 ರಿಂದ ಜುಲೈ 12 ರವರೆಗೆ ಅರ್ಜಿ ಸ್ವೀಕರಿಸಲಾಗಿತ್ತು

Leave a Reply

error: Content is protected !!