ನೇಸರ 24: ಗೋಳಿತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆಯು ಗೋಳಿತೊಟ್ಟು ಸಿದ್ದಿವಿನಾಯಕ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ.ಕೆ ವಹಿಸಿದ್ದರು. ಹಿಂದಿನ ಸಾಲಿನ ಆಯವ್ಯಯವನ್ನು ಕಾರ್ಯದರ್ಶಿ ಪದ್ಮನಾಭ ಭಟ್ ಮಂಡಿಸಿದರು. ಸಂಘವು 2020-21 ನೇ ಸಾಲಿನಲ್ಲಿ7,99,477 ನಿವ್ವಳ ಲಾಭಗಳಿಸಿದೆ ಎಂದರು. 2021-22 ಸಾಲಿನ ಮಂಜೂರಾತಿ ವರದಿಯನ್ನು ಶ್ರೀಮತಿ ಯಮುನಾ ವಿಸ್ತರಣಾಧಿಕಾರಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ಸಂಘ ಮಂಗಳೂರು ರವರು ಮಂಡಿಸಿದರು. ಡಾ.ಜೆತೇಂದ್ರ ಪ್ರಸಾದ್ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಹಸು ಸಾಕಣೆಯ ಬಗ್ಗೆ ಮತ್ತು ಕಾಲು ಬಾಯಿ ರೋಗಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ ಜನಾರ್ಧನ ಪಟೇರಿ, ನಿರ್ದೇಶಕರಾದ ಸೀತಾರಾಮ ಗೌಡ, ಓಡ್ಯಪ್ಪ ಗೌಡ ಪೆರಣ, ಗುರುರಾಜ್ ಭಟ್, ಪ್ರಸಾದ್ ಕೆ.ಪಿ, ಭಾರತಿ. ಎಸ್, ಶಶಿಧರ ಪಟೇರಿ, ಉಮೇಶ ಅಗರ್ತ, ಹರೀಶ್ ನಾಯ್ಕ, ರಾಜೀವಿ, ಕುಶಾಲಪ್ಪ ಗೌಡ ಅನಿಲ, ಸಿಬ್ಬಂದಿ ಧನಂಜಯ ಉಪಸ್ಥಿತರಿದ್ದರು