ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕಡಬ ವತಿಯಿಂದ ಸಮಗ್ರ ತೋಟಗಾರಿಕೆ ಕಾರ್ಯಕ್ರಮ

ಶೇರ್ ಮಾಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕಡಬ ವತಿಯಿಂದ ಸಮಗ್ರ ತೋಟಗಾರಿಕೆ ಕಾರ್ಯಕ್ರಮವನ್ನು ಅಕ್ಟೋಬರ್ 15 ರಂದು ಕುಂತೂರು ಗ್ರಾಮದ ರೈತ ಹರೀಶ್ ದೇವಾಡಿಗರ ಜಮೀನಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಆದ ಗೊಳಿತ್ತೋಟ್ಟು ವಲಯದ ಕುಶಾಲಪ್ಪ ಗೌಡ ರವರು ಉದ್ಘಾಟನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಗ್ರ ತೋಟಗಾರಿಕೆ ಬೆಳೆಗಳು, ದೀರ್ಘಾವಧಿ ಬೆಳೆಗಳು, ಅಲ್ಪಾವಧಿ ಬೆಳೆಗಳು, ಮಣ್ಣು ,ಗೊಬ್ಬರ, ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಹಾಗೂ ಸಂಯೋಜಕರಾದ ನೀಲಯಾ ಜೊತೆ ಕಾರ್ಯದರ್ಶಿಯಾದ ಮಾಧವಿ
ವಲಯ ಮೇಲ್ವಿಚಾರಕರಾದ ಯಶೋದಾ , ಕೃಷಿ ಮೇಲ್ವಿಚಾರಕರಾದ ಸೋಮೇಶ , ಸೇವಾ ಪ್ರತಿನಿಧಿಗಳಾದ ವೇದಾವತಿ , ಸವಿತಾ ಮತ್ತು ಸ್ವ ಸಹಾಯ ಸಂಘ ಹಾಗೂ ಪ್ರಗತಿ ಬಂದು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

error: Content is protected !!