ಪ್ರತಿಷ್ಠಿತ BYJUS ಟ್ಯೂಷನ್ ಸೆಂಟರ್ನಿಂದ ಮಾನಸಿಕ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಪೋಷಕರು ಬೈಜಾಸ್ ಕಚೇರಿಗೆ ಬೀಗ ಜಡಿದು ಅಕ್ರೋಶ ವ್ಯಕ್ತಪಡಿಸಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ.
10 ತಿಂಗಳ ಹಿಂದೆ ವಿದ್ಯಾನಗರದ BYJUS ನಲ್ಲಿ ಕೋಚಿಂಗ್ ಸೆಂಟರ್ನಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿ ತೀಕ್ಷಣಾ ನಾಯ್ಕರ್. ನಂತರ ತೀಕ್ಷಣಾಗೆ ಬೇರೆ ಕಡೆ ಪ್ರವೇಶ ಸಿಕ್ಕ ಹಿನ್ನೆಲೆ BYJUS ನಲ್ಲಿ ಪ್ರವೇಶ ಕ್ಯಾನ್ಸಲ್ ಮಾಡಿಕೊಂಡಿದ್ದ ಪೋಷಕರು. ಆದರೆ ಪ್ರವೇಶಕ್ಕಾಗಿ BYJUSಗೆ 21 ಸಾವಿರ ರೂ. ಹಣ ಕಟ್ಟಿದ್ದ ಪೋಷಕರು. ಅಲ್ಲದೇ ಕೋಚಿಂಗ್ ಗಾಗಿ 84 ಸಾವಿರ ಬ್ಯಾಂಕ್ ಲೋನ್ ಮಾಡಿಸಿಕೊಂಡಿದ್ದ BYJUS.
ವಿದ್ಯಾರ್ಥಿನಿ ಪೋಷಕರು ಮರಳಿ ಹಣ ಕೇಳಿದ್ದರಿಂದ ಕಳೆದ ಏಂಟು ತಿಂಗಳಿಂದ ಹಣ ವಾಪಸ್ ಕೊಡದೇ ಸತಾಯಿಸುತ್ತಿರುವ BYJUS ಕಚೇರಿ ಸಿಬ್ಬಂದಿ. ಕಚೇರಿಗೆ ಅಲೆದಾಡಿ ಬೇಸತ್ತು ಹೋಗಿದ್ದ ವಿದ್ಯಾರ್ಥಿನಿ ಪೋಷಕರು. ಇತ್ತ ಸಾಲವನ್ನು ಮರಳಿಸದ ಕಾರಣ ಬ್ಯಾಂಕ್ ಸಿಬಿಲ್ ಸ್ಕೋರ್ ಕಡಿಮೆ ಮಾಡಿಸಿರುವ BYJUS. ಇದರಿಂದಾಗಿ ಬೇರೆ ಕಡೆ ಸಾಲ ಸಿಗದೆ ವಿದ್ಯಾರ್ಥಿನಿ ಪೋಷಕರಿಗೆ ತೊಂದರೆಯಾಗಿದೆ. ಇತ್ತ ಹಣವೂ ಮರಳಿಸುತ್ತಿಲ್ಲ. ಅತ್ತ ಸಿಬಿಲ್ ಸ್ಕೋರ್ ಕಡಿಮೆಯಾಗಿ ಸಾಲವೂ ದೊರೆಯದೇ ಅಕ್ರೋಶಗೊಂಡಿದ್ದ ಪೋಷಕರು. ಇಂದು ಬೈಜಾಸ್ ಕಚೇರಿಗೆ ಬೀಗ ಜಡಿಯಲು ನಿರ್ಧಾರ ಮಾಡಿದ್ದ ಪೋಷಕರು. ಕಚೇರಿಯತ್ತ ಪೋಷಕರು ಬರುತ್ತಿದ್ದಂತೆ ಜಾಗ ಖಾಲಿ ಮಾಡಿ ಪರಾರಿಯಾದ ಬೈಜಾಸ್ ಸಿಬ್ಬಂದಿ. ಇಂದು ಕಚೇರಿ ಬೀಗ ಜಡಿದು ವಂಚನೆ ಮಾಡಿದ BYJUS ವಿರುದ್ಧ ಕ್ರಮಕ್ಕಾಗಿ ವಿದ್ಯಾನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿ ಪೋಷಕರು ದೂರು ನೀಡಿದ್ದಾರೆ.