ಕಡಬ ವಲಯ ಮಟ್ಟದ ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯು ಅ.30 ಸೋಮವಾರದಂದು ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಜರಗಿತು. ಇದರಲ್ಲಿ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಸಂಸ್ಕೃತ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ 10ನೆಯ ತರಗತಿಯ ಕೃಷ್ಣ ಕಾರ್ತಿಕ ಯು , ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ 10ನೇ ತರಗತಿಯ ರಿದ್ಧಿ ಶೆಟ್ಟಿ, ರಂಗೋಲಿ ಸ್ಪರ್ಧೆಯಲ್ಲಿ 10ನೇ ತರಗತಿಯ ಪ್ರಾಪ್ತಿ ಎನ್.ಕೆ ಇವರುಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಭರತನಾಟ್ಯದಲ್ಲಿ 10ನೇ ತರಗತಿಯ ಬ್ರಾಹ್ಮಿ ಬಿ.ಜೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹಿಂದಿ ಭಾಷಣ ಸ್ಪರ್ಧೆಯಲ್ಲಿ 10ನೇ ತರಗತಿಯ ಹೃದ್ಯಾ ಕೆ ತೃತೀಯ ಸ್ಥಾನ ಪಡೆದಿದ್ದಾರೆ.
ಗುಂಪು ಸ್ಪರ್ಧೆ ಕವ್ವಾಲಿಯಲ್ಲಿ ಶಾಲೆಯ ತಂಡ ದ್ವಿತೀಯ ಸ್ಥಾನಗಳಿಸಿದೆ. ಕವ್ವಾಲಿಯಲ್ಲಿ ನಿಷ್ಮ( 10ನೇ ತರಗತಿ), ಫಾತಿಮತ್ ಸಜ( 10ನೇ ತರಗತಿ), ಖತೀಜತ್ ಶಮ್ಮ (ಹತ್ತನೇ ತರಗತಿ), ಶ್ರೇಯ (9ನೇ ತರಗತಿ), ಮರಿಯಂ ಶಹನಾಝ್( 9ನೇ ತರಗತಿ) ಮತ್ತು ಸುಹೈಮ( 8ನೇ ತರಗತಿ) ಪಾಲ್ಗೊಂಡಿದ್ದರು.
ಇವರೆಲ್ಲರಿಗೂ ಶಾಲಾ ಆಡಳಿತ ಮಂಡಳಿಯವರು ಶುಭಹಾರೈಸಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದವರು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.