ಮೈಯ ಯಾವುದಾದರೂ ಭಾಗ ಬಾತು ಗಟ್ಟಿಯಾಗಿ ನೋವು ಸಿಡಿತ ಉಂಟಾಗಿ, ಕೀವು ಉಂಟಾಗುವ ಪ್ರಕ್ರಿಯೆಗೆ ಕುರು ಅಥವಾ abscess ಎನ್ನುತ್ತಾರೆ.
ಸಾಮಾನ್ಯವಾಗಿ ಯಾವುದಾದರು ಸೋಂಕು ಉಂಟಾಗಿ ಅಥವಾ ತಾಗುವಿಕೆಯ ನಂತರ ಉಂಟಾದ ಬಾವು ಕ್ರಮೇಣವಾಗಿ ಬೀಗಿ ತರುವಾಯ ಕೀವು ತುಂಬಿ ಒಡೆದು ಸೋರಿ ಹುಣ್ಣು ಒಣಗಿ ವಾಸಿಯಾಗುವುದು.
ಇದು ಚರ್ಮ ಅಥವಾ ಶರೀರದ ಯಾವುದೇ ಭಾಗದಲ್ಲಿಯೂ ಬರಬಹುದು. ಹಲ್ಲು, ಕೂದಲಿನ ಬುಡ, ಕಂಕುಳ, ಪ್ರಷ್ಠಭಾಗ, ಜನನೇಂದ್ರಿಯಗಳು ಇತ್ಯಾದಿ ಭಾಗಗಳಲ್ಲಿ ಕುರು ಹೆಚ್ಚಾಗಿ ಕಂಡುಬರುತ್ತದೆ.
ಅತಿಯಾಗಿ ಸ್ಟೆರಾಯ್ಡ್ ಸೇವನೆ, ಕಿಮೋಥೆರಪಿ, ಮಧುಮೇಹ, ಕ್ಯಾನ್ಸರ್, ಬೊಜ್ಜು, ರಕ್ತನಾಳದ ಕಾಯಿಲೆಗಳು, ಬೆಂಕಿ ತಾಗುವಿಕೆ, ಕುಡಿತದ ಗೀಳು ಇರುವವರು, ಮತ್ತು ಸ್ವಚ್ಛತೆ ಕಡಿಮೆ ಇರುವವರಲ್ಲಿ, ರೋಗನಿರೋಧಕ ಶಕ್ತಿ ಕಡಿಮೆ ಇದ್ದು ಕುರು ಹೆಚ್ಚಾಗಿ ಕಂಡು ಬರುತ್ತದೆ.
ರೋಗಲಕ್ಷಣಗಳು –
ನೋವು,ಕೆಂಪಾಗಿರುವಿಕೆ, ಮತ್ತು ಸಿಡಿದಂತಹ ಅನುಭವ, ಕೀವು ತುಂಬಿದ ಊತ, ಉರಿ ಇತ್ಯಾದಿ.
ಸೋಂಕು ರಕ್ತಕ್ಕೆ ತಗುಲಿದರೆ ಜ್ವರ ಅಥವಾ ವಾಸಿಯಾಗದ ಹುಣ್ಣಾಗಿ ಮುಂದುವರಿದು ಪ್ರಾಣಾಂತಿಕವೂ ಆಗಬಹುದು.
ಹೋಮಿಯೋಪತಿ ಔಷಧಗಳು-
ಹೋಮಿಯೋಪತಿಯಲ್ಲಿ ಕುರುವನ್ನ ಸೋಂಕು ಹರಡದಂತೆ ಶೀಘ್ರವಾಗಿ ಗುಣಪಡಿಸುವ ಔಷಧಿಗಳಿವೆ. ಇವುಗಳ ಸೇವನೆಯಿಂದ ಮತ್ತೆ ಮತ್ತೆ ಬರುತ್ತಿರುವ ಕುರುಗಳನ್ನು ನಿಯಂತ್ರಿಸಬಹುದಾಗಿದೆ. ಬೆಲಡೋನ, ಕಲ್ಕೇರಿಯ ಸಲ್ಫ್, ಅರ್ಸ್ನಿಕಮ್ ಆಲ್ಬಮ್, ಕ್ಯಾಲೆಂಡುಲ, ಗನ್ ಪೌಡರ್, ಹೆಪರ್ ಸಲ್ಫ್, ಮರ್ಕ್ ಸೊಲ್, ಇಚಿನೇಶಿಯ, ಮೆರಿಸ್ಟಿಕ, ಪೈರೋಜಿನಂ, ಸಿಲೀಸಿಯ, ಟ್ಯಾರೆಂಟುಲ ಕ್ಯುಬೆನ್ಸಿಸ್ ಇತ್ಯಾದಿ ಔಷಧಿಗಳನ್ನು ಲಕ್ಷಣಕ್ಕೆ ಸರಿಯಾಗಿ ಸಮತ್ವದ ನಿಯಮದ ಪ್ರಕಾರ ಕೊಟ್ಟಲ್ಲಿ ರೋಗಿಯು ಸಂಪೂರ್ಣ ಗುಣಮುಖನಾಗುತ್ತಾನೆ.
(ವಿ ಸೂ – ಯಾವುದೇ ಔಷಧಿಯನ್ನು ತಜ್ಞ ಹೋಮಿಯೋಪತಿ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು.)
ಡಾ.ಅನೀಶ್ ಕುಮಾರ್ ಸಾದಂಗಾಯ
BHMS, MD(Hom)
ಜ್ಯೋತಿವೈದ್ಯ ಹೋಮಿಯೋ ಕ್ಲಿನಿಕ್, ದುರ್ಗಾಶ್ರೀ ಟವರ್ಸ್ ನೆಲ್ಯಾಡಿ
9900224260