ಕನ್ನಡವನ್ನು ಪ್ರೀತಿಸಿ ಉಳಿಸಿ ಬೆಳೆಸುವ ಹೊಣೆ ಕನ್ನಡಿಗರದ್ದು- ವಿಶ್ವನಾಥ್ ಎಸ್

ಶೇರ್ ಮಾಡಿ

ಗುತ್ತಿಗಾರಿನ ಬ್ಲೆಸ್ಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಹಾಗೂ ಸಭೆಯ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ್ ಎಸ್. ರವರು ವಹಿಸಿದ್ದರು. ನಂತರ ಮಾತನಾಡಿದ ಅವರು “ಕನ್ನಡಿಗರಾದ ನಾವು ಕನ್ನಡ ಪ್ರೇಮ ಮೂಡಿಸಿಕೊಳ್ಳಬೇಕು. ಕನ್ನಡವನ್ನು ಪ್ರೀತಿಸಿ ಉಳಿಸಿ ಬೆಳೆಸುವ ಹೊಣೆ ಕನ್ನಡಿಗರದ್ದು” ಎಂದು ಹೇಳಿದರು.

ಮುಖ್ಯ ಶಿಕ್ಷಕಿ ಸಿ|ಟ್ರೀಸಾ ಜಾನ್ ರವರು ಮಾತನಾಡಿ “ಕನ್ನಡ ಎನ್ನುವುದು ನಮ್ಮ ಭಾಷೆ. ತಾಯಿಯನ್ನು ಹೇಗೆ ಪ್ರೀತಿಸುತ್ತೇವೆಯೋ ಹಾಗೆ ಕನ್ನಡವನ್ನು ಪ್ರೀತಿಸಬೇಕು “ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲಿಜೋ ಜೋಸ್, ಪದಾಧಿಕಾರಿಗಳಾದ ಶ್ರೀಮತಿ ಮೋಹಿನಿ, ಶ್ರೀಮತಿ ಹಿತ, ಮಹಮ್ಮದ್ ಹಸೈನಾರ್ ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಕ್ಷಕಿ ಕು.ಶಾಂತ ಕುಮಾರಿ ಎಲ್ಲರನ್ನು ಸ್ವಾಗತಿಸಿ, ವಿದ್ಯಾರ್ಥಿ ಶೇರಿನ್ ವರ್ಗಿಸ್ ವಂದಿಸಿದರು. ಶಿಕ್ಷಕಿ ಶ್ರೀಮತಿ ತಾರದೇವಿ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ವೀಕ್ಷ ಎಸ್, ಜಸ್ವಿನ್, ಜಾಕ್ಸನ್ ನಿರೂಪಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

error: Content is protected !!