ಸಾಮಾನ್ಯವಾಗಿ ಮಹಿಳೆಯರು ಒಂದೋ ಎರಡೋ ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ, ಇಲ್ಲೊಂದು ಅಚ್ಚರಿ ಮೂಡಿಸುವ ಪ್ರಕರಣ ಬೆಳಕಿಗೆ ಬಂದಿದೆ. ತಾಯ್ತನ ಎನ್ನುವುದು ಸವಾಲಿನ ಸಂಗತಿ ಕೂಡಾ ಹೌದು. ಗರ್ಭಾವಸ್ಥೆಯಲ್ಲಿ ಅನೇಕ ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಎದುರಾಗುತ್ತವೆ. ಇನ್ನು ಮಗುವಿನ ಜನನದ ನಂತರ, ತಾಯಿಯ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮೊದಲಿನಂತೆಯೇ ಎಲ್ಲವೂ ನಡೆಯುತ್ತದೆ ಎಂದರೆ ಸಾಧ್ಯವಾಗುವುದಿಲ್ಲ. ತನಗಿಂತ ಮೊದಲು ತನ್ನ ಮಗು ಎನ್ನುವಂತೆ ಬದುಕಬೇಕಾಗುತ್ತದೆ. ಪ್ರತಿಯೊಬ್ಬ ತಾಯಿಯೂ ಹೀಗೆಯೇ ಬದುಕುತ್ತಾಳೆ ಕೂಡಾ. ಇನ್ನು ಮಕ್ಕಳನ್ನು ಹುಟ್ಟಿಸಿದರೆ ಸಾಲದು ಅವರಿಗೆ ಜೀವನದಲ್ಲಿ ಒಳ್ಳೆಯ ವಿದ್ಯೆ, ಬುದ್ದಿ,ಕಲಿಸುವುದು ಕೂಡಾ ಮುಖ್ಯ. ಅಲ್ಲದೆ ಮಕ್ಕಳತ್ತ ತಮ್ಮ ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಅದೆಷ್ಟೋ ಜನ ಒಂದು ಅಥವಾ ಎರಡು ಮಕ್ಕಳಾದರೆ ಸಾಕು ಎನ್ನುತ್ತಾರೆ. ಆದರೆ, 26 ವರ್ಷದ ರಷ್ಯಾದ ಮಹಿಳೆ ಕ್ರಿಸ್ಟಿನಾ ಒಜ್ಟುರ್ಕ್ ಒಂದೆರಡಲ್ಲ ಬರೋಬ್ಬರಿ 22 ಮಕ್ಕಳ ತಾಯಿಯಾಗಿರುವುದು ಆಶ್ಚರ್ಯಕರವಾಗಿದೆ.
26 ವರ್ಷದ ಮಹಿಳೆಗೆ 22 ಮಕ್ಕಳು :
26 ವರ್ಷದ ಮಹಿಳೆ, ಕ್ರಿಸ್ಟಿನಾ, ಜಾರ್ಜಿಯಾದ ಓಜ್ಟರ್ಕ್ನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಕುಟುಂಬದಲ್ಲಿ 100 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಬೇಕು ಎನ್ನುವುದು ಈ ಮಹಿಳೆಯ ಮನದಾಸೆ. ಭವಿಷ್ಯದಲ್ಲಿ ಒಟ್ಟು 100 ಮಕ್ಕಳನ್ನು ಹೆರುವ ಯೋಜನೆ ಕೂಡಾ ಇದೆಯಂತೆ. 26 ವರ್ಷದ ಹುಡುಗಿ 22 ಮಕ್ಕಳನ್ನು ಹೊಂದಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಈಗ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಆದರೆ, ಮಾಹಿತಿಯ ಪ್ರಕಾರ, ಕ್ರಿಸ್ಟಿನಾ ಅವರ ಹಿರಿಯ ಮಗಳು 8 ವರ್ಷದ ವಿಕ್ಟೋರಿಯಾ ಕ್ರಿಸ್ಟಿನಾ ಅವರ ಹೊಟ್ಟೆಯಿಂದಲೇ ಜನಿನಿಸಿರುವ ಮಗು. ಉಳಿದ 21 ಮಕ್ಕಳು ಬಾಡಿಗೆ ತಾಯ್ತನದ ಮೂಲಕ ಜನಿಸಿದವಾಗಿವೆ. ಈ ಪೈಕಿ 20 ಮಕ್ಕಳು 2020 ರಲ್ಲಿ ಜನಿಸಿವೆ. ಕ್ರಿಸ್ಟಿನಾ ತನ್ನ ಪ್ರತಿಯೊಂದು ಮಕ್ಕಳನ್ನು ತುಂಬಾ ಪ್ರೀತಿಸುತ್ತಾಳೆ.
ಪತ್ನಿಯ ನಿರ್ಧಾರಕ್ಕೆ ಮಿಲಿಯನೇರ್ ಪತಿಯಾ ಬೆಂಬಲ :
2021 ರಲ್ಲಿ, ಕುಟುಂಬವು ಅವರ ಕಿರಿಯ ಮಗಳು ಒಲಿವಿಯಾ ಜನನವಾಗಿದೆ. ಕ್ರಿಸ್ಟಿನಾ ತನ್ನ ಮಿಲಿಯನೇರ್ ಪತಿಯ ಸಹಾಯದಿಂದ ಒಟ್ಟು 105 ಮಕ್ಕಳನ್ನು ಹೊಂದುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. 58 ವರ್ಷದ ಒಜ್ಟುರ್ಕ್ ಗ್ಯಾಲಿಪ್ ತನ್ನ ಪತ್ನಿ ಕ್ರಿಸ್ಟೀನಾಗಿಂತ 32 ವರ್ಷ ಹಿರಿಯ. ಈತ ಹೋಟೆಲ್ ಮಾಲೀಕನಾಗಿದ್ದು, ಈ ವರ್ಷದ ಆರಂಭದಲ್ಲಿ, ಅಕ್ರಮ ಡ್ರಗ್ಸ್ ಖರೀದಿಸಿದ ಆರೋಪದ ಮೇಲೆ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ಪತಿಯ ಬಂಧನದ ನಂತರ, ತನ್ನ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸ್ವತಃ ಕ್ರಿಸ್ಟಿನಾ ವಹಿಸಿಕೊಂಡಿದ್ದಾಳೆ. ತನ್ನ ಪತಿಯ ಅನುಪಸ್ಥಿತಿಯಲ್ಲಿ ತನ್ನ ಒಂಟಿತನದ ಭಾವನೆಯನ್ನು ಅವರು Instagram ವೀಡಿಯೊಗಳಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
ದಿ ಸನ್ ಫ್ಯಾಬುಲಸ್ ಮ್ಯಾಗಜೀನ್ಗೆ ನೀಡಿದ ಸಂದರ್ಶನದಲ್ಲಿ, ಅವರು ಮಾರ್ಚ್ 2020 ಮತ್ತು ಜುಲೈ 2021 ರ ನಡುವೆ ಬಾಡಿಗೆ ತಾಯ್ತನಕ್ಕಾಗಿ ಸುಮಾರು 1.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಒಂದು ಕಾಲದಲ್ಲಿ ಅವರ ಮನೆಯಲ್ಲಿ 16 ಶುಶ್ರೂಷಕಿಯರು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಅವರ ವೇತನಕ್ಕಾಗಿ 68 ಲಕ್ಷ ರೂ. ಯನ್ನು ವ್ಯಯಿಸುತ್ತಿದ್ದರು.