ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,(ರಿ )ಬಿ.ಸಿ ಟ್ರಸ್ಟ್ ಕಡಬ ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪರಮ ಪೂಜ್ಯ ರಾಜಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ ಹೆಗ್ಗಡೆ ಯವರ ಆಶೀರ್ವಾದದೊಂದಿಗೆ ರಚನೆಯಾದ ಜಾನಕಿರವರ ವಾತ್ಸಲ್ಯ ಮನೆಯ ಗ್ರಹ ಪ್ರವೇಶವು ಕಳೆದ ಶನಿವಾರ ಗಣಹೋಮ ಹಾಗೂ ಸ್ಥಳೀಯ ಶ್ರೀ ಲಕ್ಷ್ಮಿನರಸಿಂಹ ಭಜನಾ ಮಂಡಳಿಯ ಭಜನೆಯೊಂದಿಗೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಂತರ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ 2 ವಿಭಾಗದ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಮನೆ ಹಸ್ತಾಂತರವನ್ನು ಮಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿಯವರು ವಾತ್ಸಲ್ಯ ಮನೆಯ ನಾಮ ಫಲಕವನ್ನು ಅನಾವರಣಗೊಳಿಸಿದರು.
ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಶ್ವನಾಥ ಕೊಪ್ಪ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಕಾಣಿಯೂರು ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷರಾದ ಕುಸುಮಾದರ ಗೌಡ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಮಹೇಶ ಕೆ, ತಾಲೂಕು ಪ್ರಗತಿ ಬಂದ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಹಾರ್ಪಲ, ಕಾಣಿಯೂರು ಶಿರಾಡಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ರೋಹಿತ ಗೌಡ ,ಅನಿಲ ಕಡಬ ಶೌರ್ಯ ಘಟಕದ ಮಾಸ್ಟರ್ ಪ್ರಶಾಂತ್ ಶುಭ ಹಾರೈಸಿದರು.
ತಾಲೂಕಿನ ಯೋಜನಾಧಿಕಾರಿಗಳಾದ ಮೇದಪ್ಪ ಗೌಡ ಎನ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು ಕಡಬ ವಲಯದ ಮೇಲ್ವಿಚಾರಕರಾದ ರವಿಪ್ರಸಾದ್ ರವರು ಕಾರ್ಯಕ್ರಮ ನಿರೂಪಿಸಿದರು.
ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರೀಮತಿ ಚೇತನ ಜಿ ಧನ್ಯವಾದ ನೀಡಿದರು. ವಲಯ ಮೇಲ್ವಿಚಾರಕರಾದ ಹರ್ಷಕುಮಾರಿ ,ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಗೂ ತಾಲೂಕಿನ ಯೋಜನೆಯ ಸಿಬ್ಬಂದಿ ಗಳು, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಸಹಕರಿಸಿದರು.