ನೆಲ್ಯಾಡಿ ಜೇಸಿಐ 2022ನೇ ಸಾಲಿನ ಪದಗ್ರಹಣ ಸಮಾರಂಭ

ಶೇರ್ ಮಾಡಿ

ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ, ಸಮಾಜಕ್ಕೆ ನಾವು ಏನು ನೀಡಿದ್ದೇವೆ ಅದು ಮುಖ್ಯ,ನಮ್ಮ ವೃತ್ತಿಪರತೆಯೊಂದಿಗೆ,ಇಂತಹ ಸೇವಾ ಸಂಸ್ಥೆಗಳ ಮುಖಾಂತರ ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ನಮಗೆ ಆತ್ಮ ತೃಪ್ತಿ ಇರುತ್ತದೆ .

– ರಾಮಕೃಷ್ಣ ಮಲ್ಲಾರ

ನೇಸರ ಫೆ.03: ಜೇಸಿಐ ನೆಲ್ಯಾಡಿ ಇದರ 2022ನೇ ಸಾಲಿನ ಘಟಕಾಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಜ.31 ರಂದು ನೆಲ್ಯಾಡಿಯ ಸರಕಾರಿ ಉನ್ನತ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಡಬ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ, ಸಮಾಜಕ್ಕೆ ನಾವು ಏನು ನೀಡಿದ್ದೇವೆ ಅದು ಮುಖ್ಯ,ನಮ್ಮ ವೃತ್ತಿಪರತೆಯೊಂದಿಗೆ,ಇಂತಹ ಸೇವಾ ಸಂಸ್ಥೆಗಳ ಮುಖಾಂತರ ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ನಮಗೆ ಆತ್ಮ ತೃಪ್ತಿ ಇರುತ್ತದೆ ಎಂದರು ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ವಲಯ ಉಪಾಧ್ಯಕ್ಷೆ ಸ್ವಾತಿ.ಜೆ.ರೈಯವರು ಮಾತನಾಡಿ ನೆಲ್ಯಾಡಿಯ ಪೂರ್ವಾಧ್ಯಕ್ಷರುಗಳ ಆದರಾತಿಥ್ಯ,ಘಟಕಕ್ಕೆ ಇರುವ ಇತಿಹಾಸ ಮತ್ತು ಸದಸ್ಯರುಗಳ ಭಾಗವಹಿಸುವಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ನೂತನ ಆಡಳಿತ ಮಂಡಳಿಗೆ ಶುಭವನ್ನು ಹಾರೈಸಿದರು.
ಜೇಸಿಐ ವಲಯ 15ರ ವಲಯಾಧ್ಯಕ್ಷ ರೋಯನ್ ಉದಯ ಕ್ರಾಸ್ತಾರವರು ನೆಲ್ಯಾಡಿ ಜೇಸಿಐ ಘಟಕಕ್ಕೂ ತನಗೂ ಹಲವಾರು ವರ್ಷಗಳಿಂದ ಸಂಪರ್ಕ ವಿದ್ದು, ಜೇಸಿ ಸದಸ್ಯನಾಗಿ, ಅಧಿಕಾರಿಯಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ,39 ವರ್ಷ ಇತಿಹಾಸವುಳ್ಳ ಈ ಘಟಕ ಹಲವಾರು ಸಮಾಜಮುಖಿ ಕೆಲಸ ಗಳನ್ನು ಮಾಡುತ್ತಾ ಬಂದಿದೆ ಎಂದು ನುಡಿದರು.ನೂತನವಾಗಿ ಆಯ್ಕೆಯಾದ ಘಟಕದ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.

ನಿರ್ಗಮನ ಅಧ್ಯಕ್ಷ ಗಿರೀಶ್.ಡಿ.ಯವರು ಗತಕಾಲದ ವರದಿಯನ್ನು ಸಭೆಯಲ್ಲಿ ವಾಚಿಸಿ,ಸಹಕರಿಸಿದ ಎಲ್ಲರಿಗೂ ಶಾಲುಹೊದಿಸಿ ಕೃತಜ್ಞತೆಯನ್ನು ಸಲ್ಲಿಸಿದರು. 2022ನೇ ಸಾಲಿನ ಅಧ್ಯಕ್ಷೆ ಜಯಂತಿ.ಬಿ.ಎಂ.ರವರಿಗೆ ಪ್ರಮಾಣವಚನವನ್ನು ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.
ನವ್ಯಾ ಪ್ರಸಾದ್ ಹಾಗೂ ವಿನ್ಯಾಸ್ ಬಂಟ್ರಿಯಾಲ್ ರವರು ಈ ಸಂದರ್ಭದಲ್ಲಿ ಜೆಸಿಐ ನೆಲ್ಯಾಡಿ ಘಟಕಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡರು.
ಜೆಜೆಸಿ ಅಧ್ಯಕ್ಷೆ ಭವಿಷ್ಯ ಜೆ.ಆರ್,2022ನೇ ಸಾಲಿನ ಕಾರ್ಯದರ್ಶಿ ಪ್ರವೀಣ್ ಎಸ್.ಎಂ., ಮಹಿಳಾ ಜೇಸಿ ಸಂಯೋಜಕಿಯಾಗಿ ಜಯಲಕ್ಷ್ಮಿ ಪ್ರಸಾದ್, ಜೆಜೆಸಿ ಅಧ್ಯಕ್ಷ ಅಕ್ಷಯ್, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಪುರಂದರ ಗೌಡ ಡೆಂಜ,ವೇದಿಕೆಯಲ್ಲಿ ಉಪಸ್ಥಿತರಿದ್ದರು.

2021ನೇ ಸಾಲಿನ ಸಾಧನಾಶ್ರೀ ಪ್ರಶಸ್ತಿ ಪುರಸ್ಕೃತ ಪೂರ್ವಾಧ್ಯಕ್ಷ ಜೇಸಿ.ಚಂದ್ರಶೇಖರ್ ಬಾಣಜಾಲುರವರನ್ನು ಸನ್ಮಾನಿಸಲಾಯಿತು.ಅತಿಥಿಗಳಾಗಿದ್ದ ರಾಮಕೃಷ್ಣ ಮಲ್ಲಾರ, ರೋಯನ್ ಉದಯ ಕ್ರಾಸ್ತಾ, ಸ್ವಾತಿ.ಜೆ.ರೈ, ಘಟಕದ ಪೂರ್ವಾಧ್ಯಕ್ಷ ಜೇಸಿ.ಎಚ್.ಜಿ.ಎಫ್.ಶಿವಪ್ರಸಾದ್ ,ಕಾರ್ಯಕ್ರಮದ ಯೋಜನಾ ನಿರ್ದೇಶಕ ಜಯಾನಂದ ಬಂಟ್ರಿಯಾಲ್, 2021ನೇ ಸಾಲಿನ ಅಧ್ಯಕ್ಷ ಗಿರೀಶ್.ಡಿ.ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಲಯದಿಂದ ಆಗಮಿಸಿದ ಬೇರೆ ಬೇರೆ ಘಟಕದ ಪದಾಧಿಕಾರಿಗಳು,ನೂತನವಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಜಯಂತಿ.ಬಿ ಮತ್ತು ತಂಡದ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.
ಪೂವಾರ್ವಧ್ಯಕ್ಷ ರವೀಂದ್ರ ಟಿ.ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಗಿರೀಶ್ ಡಿ., ಸ್ವಾಗತಿಸಿದರು. ಪೂವಾರ್ವಧ್ಯಕ್ಷರಾದ ಪುರಂದರ ಗೌಡ ಡೆಂಜ,ಪ್ರಕಾಶ್ ಕೆ.ವೈ.,ಜಾನ್.ಪಿ.ಎಸ್.ಜನಾರ್ಧನ.ಜಿ ರವರು ಅತಿಥಿಗಳನ್ನು ಪರಿಚಯಿಸಿದರು. ಜಯಾನಂದ ಬಂಟ್ರಿಯಾಲ್ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಜಯಂತಿ. ಬಿ.ಎಂ. ರವರನ್ನು ಸಭೆಗೆ ಪರಿಚಯಿಸಿದರು.ಸುಚಿತ್ರಾ ಜೆ.ಬಂಟ್ರಿಯಾಲ್ ಜೇಸಿವಾಣಿ ವಾಚಿಸಿದರು.ಕಾರ್ಯದರ್ಶಿ ಪ್ರವೀಣ್ ಎಸ್.ಎಂ ವಂದಿಸಿದರು.

ಜಾಹೀರಾತು

Leave a Reply

error: Content is protected !!