ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರವಿವಾರ ಆರಂಭಗೊಂಡ ರಾಜ್ಯ ಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟದಲ್ಲಿ ಆರಂಭದ ದಿನದಲ್ಲಿ ಮೂವರು ವಿದ್ಯಾರ್ಥಿಗಳು ನೂತನ ದಾಖಲೆ ಸೃಷ್ಠಿಸಿದ್ದಾರೆ. ಬಾಲಕರ ವಿಭಾಗದ 800 ಮೀಟರ್ ಓಟದಲ್ಲಿ ವಿದ್ಯಾನಗರ ಕ್ರೀಡಾ ನಿಲಯದ ಸಯ್ಯಿದ್ ಶಬ್ಬೀರ್, ಬಾಲಕಿಯರ ವಿಭಾಗದ ಹ್ಯಾಮತ್ ತ್ರೋ ದಲ್ಲಿ ಶಿರಸಿಯ ಧನ್ಯಾ ನಾಯಕ್ ಮತ್ತು ಬಾಲಕರ ವಿಭಾಗದ ಜಾವಲಿನ್ ತ್ರೋ ದಲ್ಲಿ ಬೀದರ್ ಪುಷ್ಪಕ್ ನೆಲವಾಡ್ ನೂತನ ದಾಖಲೆ ನಿರ್ಮಿಸಿದ್ದಾರೆ.
ಬಾಲಕರ ವಿಭಾಗದ 800 ಮೀ. ಓಟದ ಸ್ಪರ್ಧೆಯಲ್ಲಿ ವಿದ್ಯಾನಗರ ವಸತಿ ಶಾಲೆಯ ಸಯ್ಯಿದ್ ಶಬ್ಬೀರ್ 1 ನಿ.57.5 ಸೆ. ಪೂರೈಸಿ 2016-17ರಲ್ಲಿ ಉಡುಪಿ ಜಿಲ್ಲೆಯ ದಿನೇಶ್ ಎಂ ನಾಯಕ್(2ನಿ.0.76ಸೆ) ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಬೆಳಗಾವಿಯ ದಕ್ಷ್ ಪಾಟೀಲ್ ದ್ವಿತೀಯ ಸ್ಥಾನ ಮತ್ತು ಬಾಗಲಕೋಟೆ ಜಿಲ್ಲೆಯ ಅಬೂಬಕ್ಕರ್ ಕಡಬ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದ ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಸಿರಸಿ ಜಿಲ್ಲೆಯ ಧನ್ಯಾ ನಾಯಕ್ ಅವರು 43.34 ಮೀ. ಎಸೆಯುವ ಮೂಲಕ 2021-22ರಲ್ಲಿ ತಾನೇ ನಿರ್ಮಿಸಿದ್ದ(38.90 ಮೀ) ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ತೃಷಿಕಾ ಪಿ(41.86 ಮೀ) ದ್ವಿತೀಯ ಸ್ಥಾನ ಮತ್ತು ಶಿವಮೊಗ್ಗದ ದಿವ್ಯಾ ಎನ್ (34.30) ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದ ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಬೀದರ್ ಜಿಲ್ಲೆಯ ಪುಷ್ಪಕ್ ನೆಲವಾಡ್ ಅವರು 57.06 ಮೀ. ಎಸೆದು 2016-17ರ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯ ಸುನಿಲ್ ಕುಮಾರ್(53.80 ಮೀ.) ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಚಿಕ್ಕಮಂಗಳೂರಿನ ಮನೋಜ್ ಎ.ಎಸ್. (46.04 ಮೀ) ದ್ವಿತೀಯ ಸ್ಥಾನ ಮತ್ತು ಯಾದಗಿರಿ ಜಿಲ್ಲೆಯ ರೋಹಿತ್ ರಾಥೋಡ್(44.63 ಮೀ.) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ರೋಹಿತ್ ಕುಮಾರ್ ಪ್ರಥಮ, ಉತ್ತರ ಕನ್ನಡ ಜಿಲ್ಲೆಯ ಪ್ರಕಾಶ್ ಗೌಡ ದ್ವಿತೀಯ ಮತ್ತು ಮೈಸೂರು ಜಿಲ್ಲೆಯ ಗೌತಮ್ ಪಿ. ತೃತೀಯ ಸ್ಥಾನ, ಶಾಟ್‍ಫುಟ್ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಕಲ್ಲೋಲಪ್ಪ ಬಂಡೀವಡ್ಡರ್ ಪ್ರಥಮ, ಚಿಕ್ಕಮಗಳೂರಿನ ಮನೋಜ್ ಎಸ್ ದ್ವಿತೀಯ ಮತ್ತು ಹಾಸನ ಜಿಲ್ಲೆಯ ಸಂತೋಷ್ ಜಿ ತೃತೀಯ ಸ್ಥಾನ, 100 ಮೀ. ಹರ್ಡಲ್ಸ್‍ನಲ್ಲಿ ರಾಮನಗರ ಜಿಲ್ಲೆಯ ಚಂದನ್ ಎಸ್ ಪ್ರಥಮ, ಉಡುಪಿ ಜಿಲ್ಲೆಯ ಹಿತೇಶ್ ದ್ವಿತೀಯ ಮತ್ತು ಶಿವಮೊಗ್ಗ ಜಿಲ್ಲೆಯ ಆಯುಷ್ ಎಂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಸುಮಂತ ಕೆ.ಎಸ್. ಪ್ರಥಮ, ವಿಜಯಪುರ ವಸತಿ ಶಾಲೆಯ ಪ್ರಜ್ವಲ್ ಲಮಾಣಿ ದ್ವಿತೀಯ ಮತ್ತು ಉಡುಪಿ ಮನೀಷ್ ತೃತೀಯ ಸ್ಥಾನ, 3000 ಮೀ. ಓಟದ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದನುಷ್ ಬಿ.ಎಸ್. ಪ್ರಥಮ, ವಿದ್ಯಾನಗರ ವಸತಿ ಶಾಲೆಯ ಚಂದ್ರಶೇಖರ್ ದ್ವಿತೀಯ ಮತ್ತು ಕೂಡಿಗೆ ವಸತಿ ಶಾಲೆಯ ಚೆನ್ನಪ್ಪ ಬಸವ ಬಿ ತೃತೀಯ ಸ್ಥಾನ, 200 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಮೋನಿಶ್ ಚಂದ್ರಶೇಖರ್ ಪ್ರಥಮ, ದಾರವಾಡ ಜಿಲ್ಲೆಯ ವಿಜಯ ಕುಮಾರ್ ಕೆಲಗಡೆ ದ್ವಿತೀಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿತಿನ್ ಗೌಡ ಎಂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಅವನಿ ಪ್ರಥಮ, ಹಾಸನ ಜಿಲ್ಲೆಯ ದೀಕ್ಷಿತ ಬಿ.ಆರ್ ದ್ವೀತಿಯ ಮತ್ತು ಶಿವಮೊಗ್ಗ ಜಿಲ್ಲೆಯ ಮೋನಿಕ ಎಂ ಘಟ್ಕೆ ತೃತೀಯ ಸ್ಥಾನ, ಹೈಜಂಪ್ ಸ್ಪರ್ಧೆಯಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಹರ್ಷಿತ ಪಿ. ಪ್ರಥಮ, ದ.ಕ.ಜಿಲ್ಲೆಯ ರಕ್ಷಿತಾ ದ್ವಿತೀಯ, ರಾಮನಗರ ಜಿಲ್ಲೆಯ ಸಿದ್ದಲಿಂಗಮ್ಮ ತೃತೀಯ ಸ್ಥಾನ, ಡಿಸ್ಕಸ್ ಎಸೆತದಲ್ಲಿ ಶಿರಸಿ ಜಿಲ್ಲೆಯ ಧನ್ಯಾ ನಾಯಕ್ ಪ್ರಥಮ, ಮೈಸೂರು ಜಿಲ್ಲೆಯ ವರ್ಷಾ ಎಸ್ ಗೌಡ ದ್ವಿತೀಯ ಮತ್ತು ದ.ಕ.ಜಿಲ್ಲೆಯ ಐಶಿನಿ ಅರುಣ್ ಶೆಟ್ಟಿ ತೃತೀಯ ಸ್ಥಾನ, 100 ಮೀ. ಹರ್ಡಲ್ಸ್‍ನಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಹರ್ಷಿತ ಪಿ. ಪ್ರಥಮ, ಮೈಸೂರು ಜಿಲ್ಲೆಯ ಯಶಸ್ವಿನಿ ಕೆ.ಪಿ ದ್ವಿತೀಯ ಮತ್ತು ದ.ಕ. ಜಿಲ್ಲೆ ಸಮೃದ್ಧಿ ಜೆ.ಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದ 800 ಮೀ ಓಟದಲ್ಲಿ ರಾಮನಗರ ಜಿಲ್ಲೆಯ ರಶ್ಮಿತಾ ಗೌಡ ಪ್ರಥಮ, ದ.ಕ.ಜಿಲ್ಲೆಯ ಕಡಬದ ಚರಿಷ್ಮಾ ದ್ವಿತೀಯ ಮತ್ತು ಚಿಕ್ಕಮಗಳೂರು ಜಿಲ್ಲೆಯ ವೀಕ್ಷಿತಾ ಬಿ.ಎಸ್ ತೃತೀಯ ಸ್ಥಾನ, 200 ಮೀ. ಓಟದಲ್ಲಿ ಶಿವಮೊಗ್ಗ ಜಿಲ್ಲೆಯ ಮಮತಾ ಎಂ ಪ್ರಥಮ, ಬಾಗಲಕೋಟೆ ಜಿಲ್ಲೆಯ ಭಾಗ್ಯಶ್ರೀ ಜಾಧವ್ ದ್ವಿತೀಯ ಮತ್ತು ಶಿವಮೊಗ್ಗ ಜಿಲ್ಲೆಯ ಇಹ್ರಾಮ್ ಶೇಖ್ ತೃತೀಯ ಸ್ಥಾನ, 3000 ಮೀ, ಓಟದಲ್ಲಿ ದ.ಕ. ಜಿಲ್ಲೆಯ ಚರಿಷ್ಮಾ ಪ್ರಥಮ, ಚಿಕ್ಕಮಗಳೂರು ಜಿಲ್ಲೆಯ ವೀಕ್ಷಿತಾ ಬಿ.ಎಸ್ ದ್ವಿತೀಯ ಮತ್ತು ಮೈಸೂರು ಜಿಲ್ಲೆಯ ದೀಕ್ಷಾ ಎಸ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.