ಧರ್ಮಸ್ಥಳ: ಹಳೆ ವರುಷ ಕಳೆದು ಹೊಸ ವರ್ಷ ಕಾಲಿಡುತ್ತಿದೆ.ಕಳೆದ ಘಟನೆಗಳನ್ನು ಮೆಲುಕು ಹಾಕುತ್ತಾ ಹೊಸ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಾನವು ಫಲ ಪುಷ್ಪಗಳಿಂದ ಸಿಂಗಾರಗೊಂಡಿದೆ.
ಬೆಂಗಳೂರಿನ ಉದ್ಯಮಿ ಎಸ್.ಗೋಪಾಲ್ ರಾವ್, ಆನಂದ್, ಶರವಣ್ ಸೇರಿ ಕಳೆದ 15 ವರ್ಷಗಳಿಂದ ಧರ್ಮಸ್ಥಳ ಕ್ಷೇತ್ರದ ಮೇಲಿನ ಭಕ್ತಿಯಿಂದ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮೇಲಿನ ಗೌರವದೊಂದಿಗೆ ಅವರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಹೊಸ ವರ್ಷಕ್ಕೆ ಅಲಂಕಾರ ಸೇವೆ ನೀಡುತ್ತಾ ಬಂದಿದ್ದಾರೆ.
ದೇಗುಲದ ಮುಂಭಾಗ ಒಳಾಂಗಣ, ಗರ್ಭಗುಡಿಯ ಮುಂಭಾಗ, ಕಂಬಗಳು, ಹೆಗ್ಗಡೆಯವರ ನಿವಾಸ, ಅನ್ನಪೂರ್ಣ ಛತ್ರ ಸಹಿತ ಪ್ರಮುಖ ಸ್ಥಳ ಗಳನ್ನು ಸಿಂಗರಿಸಲು 15 ಲೋಡ್ ಗಿಂತ ಅಧಿಕ ಅಲಂಕೃತ ಸಾಮಗ್ರಿಗಳನ್ನು ಬಳಸಲಾಗಿದ್ದು,ಹಣ್ಣು ಹಂಪಲು,ನಾನಾ ಬಗೆಯ ಪುಷ್ಪಗಳು, ತರಕಾರಿ ಸೇರಿ ಐದು ಲೋಡ್ ಗಿಂತ ಹೆಚ್ಚಿನ ವಸ್ತು ಬಳಸಲಾಗಿದೆ.
ಬಾಳೆಗೊನೆ, ಸೇಬು, ತೆಂಗಿನಕಾಯಿ, ಅಡಕೆ, ಕಬ್ಬು, ಮರಗೆಣಸು, ಜೋಳ, ಬದನೆ, ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಸುಮಾರು 100 ಮಂದಿಯ ತಂಡ 6 ದಿನಗಳಿಂದ ನಿರಂತರವಾಗಿ ಅಲಂಕಾರ ನಡೆಸಿದ್ದಾರೆ.ನೈಸರ್ಗಿಕ ವಸ್ತುಗಳ ಅಲಂಕಾರಕ್ಕೆ ಒತ್ತು ನೀಡಲಾಗಿದೆ. ಆಕರ್ಷಕವಾಗಿ ಕಾಣುವ ಅಲಂಕಾರ ದೇಗುಲದ ಅಂದವನ್ನು ಇಮ್ಮಡಿಗೊಳಿಸಿದೆ.

ಹೊಸ ವರ್ಷದ ಪ್ರಯುಕ್ತ ರಾಜ್ಯದ ನಾನಾ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ದೇಗುಲದ ಹೊರಾಂಗಣದ ಛಾವಣಿಯ ಮೇಲ್ಭಾಗದಲ್ಲಿ ನಂದಿವಾಹನದಲ್ಲಿ ಶಿವ-ಪಾರ್ವತಿ,ಶಿವಲಿಂಗಗಳನ್ನು ಅಲಂಕಾರಕ್ಕೆ ಜೋಡಿಸಲಾಗಿದೆ. ಉಳಿದ ಭಾಗಗಳಿಗೆ ತಟ್ಟಿಗಳನ್ನು ಅಳವಡಿಸಿ ಛಾವಣಿಯನ್ನು ಪೂರ್ಣ ಹಸಿರು ಗೊಳಿಸಲಾಗಿದೆ. ದೇವಸ್ಥಾನದ ಹೊರಾಂಗಣದ ಪ್ರವೇಶ ದ್ವಾರದಲ್ಲಿ ಆನೆಗಳ ಮುಖವರ್ಣಿಕೆಗಳನ್ನು ಅಳವಡಿಸಲಾಗಿದೆ. ಆರ್ಕಿಡ್ ಪುಷ್ಪ, ರುದ್ರಾಕ್ಷಿ, ಗುಲಾಬಿ, ಸೇವಂತಿಗೆ, ಹಿಂಗಾರ, ಸುಗಂಧ ರಾಜ ಮೊದಲಾದ ಹೂಗಳ ಅಲಂಕಾರ ಮಾಡಲಾಗಿದೆ. ಈ ಅಲಂಕಾರದ ಜತೆ ಅಳವಡಿಸಿರುವ ವಿದ್ಯುತ್ ದೀಪಗಳು ಇನ್ನಷ್ಟು ಮೆರುಗು ನೀಡುತ್ತಿವೆ.